ದೇಶ

ಚುನಾವಣೆ ಮೇಲೆ ದೀದಿ ಕಣ್ಣು, ಕಡಿಮೆ ಬೆಲೆಗೆ 50 ಸಾವಿರ ಫ್ಲಾಟ್ ಹಂಚಿಕೆಗೆ ಸಿದ್ಧತೆ

2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ....

ಚುನಾವಣೆ ಮೇಲೆ ದೀದಿ ಕಣ್ಣು, ಕಡಿಮೆ ಬೆಲೆಗೆ 50 ಸಾವಿರ ಫ್ಲಾಟ್ ಹಂಚಿಕೆಗೆ ಸಿದ್ಧತೆ
ಮಮತಾ ಬ್ಯಾನರ್ಜಿ
Published On :
ಕೋಲ್ಕತಾ: 2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ 50 ಸಾವಿರ ಫ್ಲಾಟ್ ಹಂಚಿಕೆ ಯೋಜನೆ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮುತ್ತಿದ್ದು, ಕೇಸರಿ ಪಡೆಯನ್ನು ಅಧಿಕಾರದಿಂದ ದೂರವಿಡಲು ದೀದಿ 'ನಿಜಶ್ರೀ' ಎಂಬ ಹೊಸ ವಸತಿ ಯೋಜನೆ ಘೋಷಿಸಿದ್ದಾರೆ.
ನಿಜಶ್ರೀ' ಯೋಜನೆಯಡಿ 50 ಸಾವಿರ 1 ಬಿಎಚ್ ಕೆ ಮತ್ತು 2 ಬಿಎಚ್ ಕೆ ಫ್ಲಾಟ್ ಗಳನ್ನು ನಿರ್ಮಿಸಿ, ಅವುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
378 ಚದರ ಅಡಿಯ 1 ಬಿಎಚ್ ಕೆ 7.28 ಲಕ್ಷ ರುಪಾಯಿ ಹಾಗೂ 559 ಚದರ ಅಡಿಯ 2 ಬಿಎಚ್ ಕೆಗೆ 9.26 ಲಕ್ಷ ರುಪಾಯಿ ನಿಗದಿಪಡಿಸಲಾಗಿದೆ. ತಿಂಗಳಿಗೆ 15 ಸಾವಿರದಿಂದ 30 ಸಾವಿರ ರುಪಾಯಿ ಸಂಪಾದಿಸುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಕೋಲ್ಕತಾ ಮಹಾನಗರ ಪಾಲಿಕ ಮತ್ತು ನಗರಾಭಿವೃದ್ಧಿ ಇಲಾಖೆ ಅಡಿ ರಾಜ್ಯಾದ್ಯಂತ ಐದು ಮಹಡಿಯ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಫರ್ಹಾದ್ ಹಕಿಮ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.