ರೈಲ್ವೆ ನಿಲ್ದಾಣದಲ್ಲೇ ಆರ್‌ಪಿಎಫ್ ಪೊಲೀಸ್‍ನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ಪೇದೆಗೆ ಕಪಾಳಮೋಕ್ಷ!
ರೈಲ್ವೆ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಕಲ್ಯಾಣ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಪೊಲೀಸ್ ಸಿಕ್ಕಿಬಿದ್ದಿದ್ದಾರೆ...

Published On :
ಮುಂಬೈ: ರೈಲ್ವೆ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಕಲ್ಯಾಣ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಪೊಲೀಸ್ ಸಿಕ್ಕಿಬಿದ್ದಿದ್ದಾರೆ.
ಕಳೆದ ರಾತ್ರಿ ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ 11.30ರ ಸುಮಾರಿಗೆ ಫ್ಲಾಟ್ ಫಾರ್ಮ್ ನಲ್ಲಿ ಕುಳಿತುಕೊಂಡಿದ್ದ ಮಹಿಳೆಯ ದೇಹವನ್ನು ಆರ್‌ಪಿಎಫ್ ಪೊಲೀಸ್ ಮುಟ್ಟುತ್ತಿದ್ದಾಗ ಎದುರುಗಡೆ ಕುಳಿತಿದ್ದ ವ್ಯಕ್ತಿಯೊಬ್ಬರು ಇದನ್ನು ತಮ್ಮ ಮೊಬೈಲ್ ಸೆರೆಹಿಡಿದಿದ್ದಾರೆ.
ನಂತರ ಅಲ್ಲಿದ್ದವರೆಲ್ಲಾ ಸೇರಿ ಆರ್‌ಪಿಎಫ್ ಪೊಲೀಸ್ ಗೆ ಕಪಾಳಮೋಕ್ಷ ಮಾಡಿ, ಭದ್ರತಾ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ. ಆರ್‌ಪಿಎಫ್ ಪೊಲೀಸ್ ನನ್ನು ರಾಜೇಶ್ ಜಹಂಗೀರ್ ಎಂದು ಗುರುತಿಸಲಾಗಿದೆ.
ಈ ವಿಡಿಯೋವನ್ನು ಕಂಡ ಕೇಂದ್ರ ರೈಲ್ವೆಯ ವಿಭಾಗೀಯ ಆಯುಕ್ತರು ಸಚಿನ್ ಬಲೋದೆ ಅವರು ರಾಜೇಶ್ ಜಹಂಗೀರ್ ಅಮಾನತು ಮಾಡಿದ್ದು ಆತನ ವಿರುದ್ಧ ತನಿಖೆಗೆ ಸೂಚಿಸಿದ್ದಾರೆ.
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆರ್‌ಪಿಎಫ್ ಪೊಲೀಸ್ ಕೃತ್ಯವನ್ನು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಿಳೆMumbaiಮುಂಬೈಲೈಂಗಿಕ ಕಿರುಕುಳwomanRailway Stationsuspendಅಮಾನುತುರೈಲ್ವೆ ನಿಲ್ದಾಣRPF PoliceMolestsಆರ್‌ಪಿಎಫ್ ಪೊಲೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


