ಯೋಧ ಔರಂಗಜೇಬ್ ಕೊಂದ ಉಗ್ರರ ಕೊಂದವರಿಗೆ 21 ಲಕ್ಷ ರೂ ಬಹುಮಾನ: ಬಿಜೆಪಿ ಸಂಸದ, ಶಾಸಕರ ಆಫರ್!
ಕಾಶ್ಮೀರಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಸಾವನ್ನಪ್ಪಿದ ಯೋಧ ಔರಂಗಜೇಬ್ ನನ್ನು ಕೊಂದ ಉಗ್ರರನ್ನು ಕೊಂದವರಿಗೆ 21 ಲಕ್ಷ ರೂ ಬಹುಮಾನ ನೀಡುವುದಾಗಿ ಬಿಜೆಪಿ ಪಕ್ಷದ ಸಂಸದ ಮತ್ತು ಶಾಸಕರು ಘೋಷಣೆ ಮಾಡಿದ್ದಾರೆ.

Published On :
ನವದೆಹಲಿ: ಕಾಶ್ಮೀರಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಸಾವನ್ನಪ್ಪಿದ ಯೋಧ ಔರಂಗಜೇಬ್ ನನ್ನು ಕೊಂದ ಉಗ್ರರನ್ನು ಕೊಂದವರಿಗೆ 21 ಲಕ್ಷ ರೂ ಬಹುಮಾನ ನೀಡುವುದಾಗಿ ಬಿಜೆಪಿ ಪಕ್ಷದ ಸಂಸದ ಮತ್ತು ಶಾಸಕರು ಘೋಷಣೆ ಮಾಡಿದ್ದಾರೆ.
ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಮತ್ತು ದೆಹಲಿ ಬಿಜೆಪಿ ಶಾಸಕ ಅಜೀಂದರ್ ಎಸ್ ಸಿರ್ಸಾ ಯೋಧನನ್ನು ಕೊಂದ ಉಗ್ರರನ್ನು ಕೊಂದವರಿಗೆ 21 ಲಕ್ಷ ರೂ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇಬ್ಬರೂ ನಾಯಕರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದು, ಜಂಟಿಯಾಗಿ 21 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಯೋಧ ಔರಂಗಜೇಬ್ ನನ್ನು ಪುಲ್ವಾಮ ಜಿಲ್ಲೆಯ ಕಾಲಂಪೋರಾದಿಂದ ಉಗ್ರರು ಅಪಹರಣ ಮಾಡಿದ್ದರು. ಬಳಿಕ ಆತನ ಮೇಲೆ ಹಲ್ಲೆ ಮಾಡಿ ಆತನಿಂದ ಸೇನೆಯ ಕುರಿತು ಮಾಹಿತಿ ಪಡೆಯಲಾಗಿತ್ತು. ಬಳಿಕ ಆತನನ್ನು ಕೊಂದು ಬಿಸಾಡಲಾಗಿತ್ತು. ಯೋಧ ಔರಂಗಜೇಬ್ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿಯ ಯೋಧನಾಗಿದ್ದು, 44 ರಾಷ್ಟ್ರೀಯ ರೈಫಲ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Armyಜಮ್ಮು ಮತ್ತು ಕಾಶ್ಮೀರJammu and KashmirTerrorismಭಯೋತ್ಪಾದನೆಭಾರತೀಯ ಸೇನೆAurangzebಔರಂಗಜೇಬ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


