ಎಲ್-ಜೆ v/s ಕೇಜ್ರಿವಾಲ್: ಉಪವಾಸ ನಿರತ ಮನೀಶ್ ಸಿಸೋಡಿಯಾ ಆಸ್ಪತ್ರೆಗೆ ದಾಖಲು
ಜೂನ್ 13 ರಿಂದ ಉಪವಾಸ ನಿರತರಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Published On :
ನವದೆಹಲಿ: ಜೂನ್ 13 ರಿಂದ ಉಪವಾಸ ನಿರತರಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೆ. ಗವರ್ನರ್ ಕಛೇರಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜತೆ ಧರಣಿ ನಡೆಸಿದ್ದ ಸಿಸೋಡಿಯಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಕಲಾದ್ದಾರೆಂದು ಕೇಜ್ರಿವಾಲ್ ಹೇಳಿದರು.
"ಸಿಸೋಡಿಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಸಿಸೋಡಿಯಾ ಅವರ ಕೀಟೋನ್ ಮಟ್ಟವು 7.4 ಕ್ಕೆ ತಲುಪಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿದೆ. ಇದೇ ವೇಳೆ ದೆಹಲಿ ಆರೋಗ್ಯ ಸಚಿವರಾದ ಸತ್ಯೇಂದರ್ ಜೈನ್ ಸಹ ಉಪಾವಾಸ ಸತ್ಯಾಗ್ರಹದಿಂದ ನಿಶ್ಯಕ್ತಿ, ಅನಾರೋಗ್ಯ ಸಮಸ್ಯೆಗಳುಂಟಾಗಿ ಭಾನುವಾರ ರಾತ್ರಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜೂನ್ 12ರಿಂದ ಉಪವಾಸ ನಿರತರಾಗಿದ್ದರು.
ಜೈನ್ ಆರೋಗ್ಯ ಸುಧಾರಿಸಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಜೈನ್ ಮತ್ತು ಸಿಸೋಡಿಯಾ ಜೂನ್ 11 ರಿಂದ ಕೇಜ್ರಿವಾಲ್ ಮತ್ತು ಗೋಪಾಲ್ ರೈ ಜತೆಗುಡಿ ರಾಜ ಭವನದಲ್ಲಿ ಐಎಎಸ್ ಅಧಿಕಾರಿಗಳ ಮುಷ್ಕರ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arvind Kejriwalಅರವಿಂದ ಕೇಜ್ರಿವಾಲ್Manish Sisodiaಮನೀಶ್ ಸಿಸೋಡಿಯಾL-G office protest. AAPಗವರ್ನರ್ ಕಛೇರಿ ಪ್ರತಿಭಟನೆ. ಎಎಪಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


