ದೇಶ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ: ನೀತಿ ಆಯೋಗ ವರದಿ
ಶುದ್ದ ಕುಡಿಯುವ ನೀರು ಸಿಗದೆ ಪ್ರತಿವರ್ಷ 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 60 ಕೋಟಿ ಜನರು ನೀರಿನ ಬವಣೆಯಿಂದ ಬಳಲುತ್ತಿದ್ದು, ದೇಶ ಕೆಟ್ಟ ನೀರಿನ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.

ನವದೆಹಲಿ: ಶುದ್ದ ಕುಡಿಯುವ ನೀರು ಸಿಗದೆ ಪ್ರತಿವರ್ಷ 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 60 ಕೋಟಿ ಜನರು ನೀರಿನ ಬವಣೆಯಿಂದ ಬಳಲುತ್ತಿದ್ದು, ದೇಶ ಕೆಟ್ಟ ನೀರಿನ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ಹೆಸರಿನಲ್ಲಿ ವರದಿಯನ್ನು ಇಂದು ಬಿಡುಗಡೆ ಮಾಡಿದ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ,ಬಿಕ್ಕಟ್ಟು ಮಾತ್ರ ಕೆಟ್ಟದಾಗಿ ಹೋಗಲಿದೆ ಎಂದು ಹೇಳಿದರು.
"2030 ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆ ಎರಡು ಬಾರಿ ಪೂರೈಕೆ ಮಾಡುವಷ್ಟು ಲಭ್ಯವಿರುವುದಾಗಿ ಊಹಿಸಲಾಗಿದ್ದು, ನೂರಾರು ದಶಲಕ್ಷ ಜನರಿಗೆ ತೀವ್ರವಾದ ನೀರಿನ ಕೊರತೆ ಎದುರಾಗಲಿದೆ. ಜಿಡಿಪಿಯಲ್ಲಿ ಶೇ.6 ರಷ್ಟ ಕೊರತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ವತಂತ್ರ ಏಜೆನ್ಸಿಗಳ ಮಾಹಿತಿಯಂತೆ ಶೇ. 70 ರಷ್ಟು ನೀರು ಕಲುಷಿತವಾಗಿದ್ದು, ನೀರಿನ ಗುಣಮಟ್ಟದ ಸೂಚ್ಯಂಕದಲ್ಲಿನ 122 ರಾಷ್ಟ್ರಗಳ ಪೈಕಿ ಭಾರತ 120 ನೇ ಸ್ಥಾನದಲ್ಲಿದೆ .
ಪ್ರಸಕ್ತ, 600 ಮಿಲಿಯನ್ ಭಾರತೀಯರು ತೀವ್ರ ನೀರಿನ ಬವಣೆ ಎದುರಿಸುತ್ತಿದ್ದಾರೆ . ಅಲ್ಲದೇ ಸುರಕ್ಷಿತವಾಗಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಸಾವನ್ನಪ್ಪುತ್ತಾರೆ" ಎಂದು ನೀತಿ ಆಯೋಗದ ವರದಿಯಲ್ಲಿ ಹೇಳಲಾಗಿದ್ದು. ನೀರಿನ ಸಂಪನ್ಮೂಲಗಳು ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಬೇಕಾಗದ ಅಗತ್ಯವಿದೆ ಎಂದು ಒತ್ತಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


