ವರ್ಲ್ಡ್ ಫ್ಯಾಕ್ಟ್ಬುಕ್ ನಲ್ಲಿ ವಿಹೆಚ್ಪಿ, ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'!
ಕೇಂದ್ರೀಯ ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎನ ಇತ್ತೀಚಿಗೆ ಪ್ರಕಟಿಸಿದ ವರ್ಲ್ಡ್ ಫ್ಯಾಕ್ಟ್ಬುಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.

Published On :
ನವದಹೆಲಿ: ಅಮೆರಿಕಾದ ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎ ಇತ್ತೀಚಿಗೆ ಪ್ರಕಟಿಸಿದ ವರ್ಲ್ಡ್ ಫ್ಯಾಕ್ಟ್ಬುಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.
ಸಿಐಎ ಅಮೆರಿಕಾ ಸರ್ಕಾರದ ಗುಪ್ತಚರ ಸಂಸ್ಥೆಯ ಒಂದು ಭಾಗವಾಗಿದ್ದು, ವಿಶ್ವ ಹಿಂದೂಪರಿಷದ್ ಹಾಗೂ ಬಜರಂಗ ದಳ ರಾಜಕೀಯ ಹಿತಾಸಕ್ತಿಯ ಗುಂಪುಗಳೆಂದು ವರ್ಗಕರಿಸಲಾಗಿದೆ.
ಈ ಗುಂಪಿನ ನಾಯಕರು ಚುನಾವಣೆಗೆ ನಿಲ್ಲುವುದಿಲ್ಲ ಆದರೂ, ರಾಜಕೀಯದಲ್ಲಿ ತೊಡಗಿಸಿಕೊಂಡಿರುತ್ತಾರೆ ಅಥವಾ ರಾಜಕೀಯ ಒತ್ತಡವನ್ನುಂಟುಮಾಡಲಾಗುತ್ತದೆ ಎಂದು ವಿವರಿಸಲಾಗಿದೆ.
ಭಾರತದಲ್ಲಿನ ರಾಜಕೀಯ ಹಿತಾಸಕ್ತಿ ಗುಂಪುಗಳ ಪಟ್ಟಿಯಲ್ಲಿ ಆರ್ ಎಸ್ ಎಸ್, ಹುರಿಯತ್ ಕಾನ್ಪರೆನ್ಸ್, ಜಮಾಯಿತ್ ಉಲೇಮಾ ಇ- ಹಿಂದ್ ಸಂಘಟನೆಗಳನ್ನು ಸಿಐಎ ಹೆಸರಿಸಿದೆ. ಆರ್ ಎಸ್ ಎಸ್ ರಾಷ್ಟ್ರೀಯವಾಧಿ ಸಂಘಟನೆ , ಹುರಿಯತ್ ಕಾನ್ಪರೆನ್ಸ್ ಪ್ರತೇಕತಾವಾದಿ ಗುಂಪು, ಜಮಾಯಿತ್ ಉಲೇಮಾ ಇ- ಹಿಂದ್ ಧಾರ್ಮಿಕ ಸಂಘಟನೆ ಎಂದು ಅರ್ಥೈಹಿಸಲಾಗಿದೆ.
ಸಿಐಎ ವಾರ್ಷಿಕವಾಗಿ ವರ್ಲ್ಡ್ ಫ್ಯಾಕ್ಟ್ಬುಕ್ ಪ್ರಕಟಿಸುತ್ತದೆ, ಇದು ಯಾವುದಾದರೊಂದು ದೇಶದಲ್ಲಿನ ಗುಪ್ತಚರ ಅಥವಾ ವಾಸ್ತವಿಕ ಉಲ್ಲೇಖ ವಸ್ತುಗಳನ್ನು ಯು.ಎಸ್. ಸರ್ಕಾರಕ್ಕೆ ನೀಡುತ್ತಿದೆ. ಆ ದೇಶದ ಇತಿಹಾಸ, ಜನತೆ, ಸರ್ಕಾರ, ಆರ್ಥಿಕ, ಇಂಧನ, ಭೌಗೋಳಿಕತೆ, ಸಾರಿಗೆ ಮತ್ತು ಸಂವಹನ, ರಕ್ಷಣಾ ವ್ಯವಸ್ಥೆ, ಮತ್ತಿತರ ಬಹು ಹಂತದ ವಿಷಯಗಳನ್ನು ಇದು ಒಳಗೊಂಡಿರುತ್ತದೆ.
ಸಿಐಎ 1962 ರಿಂದಲೂ 267 ರಾಷ್ಟ್ರಗಳ ಮಾಹಿತಿಯನ್ನು ಸಂಗ್ರಹಿಸಿದೆ. ಆದರೆ, 1975 ರಿಂದ ಮಾತ್ರ ಪ್ರಕಟಿಸಲಾಗುತ್ತಿದೆ. ಅಮೆರಿಕಾ ನೀತಿ ನಿರ್ವಾಹಕಾರರು ಹಾಗೂ ಸಮನ್ವಯಗಾರರಿಗಾಗಿ ವರ್ಲ್ಡ್ ಫ್ಯಾಕ್ಟ್ಬುಕ್ ಪ್ರಕಟಿಸುತ್ತಿದೆ. ಅಮೆರಿಕಾದ ಮೂರು ಗುಪ್ತಚರ ಸಂಸ್ಥೆಗಳ ಪೈಕಿ ಸಿಐಎ ಕೂಡಾ ಒಂದಾಗಿದೆ. ಅಧ್ಯಕ್ಷರ ಡೈಲಿ ಬ್ರಿಫ್ ಮತ್ತು ಎನ್ ಐಇ ಮತ್ತೆರಡು ಗುಪ್ತಚರ ಸಂಸ್ಥೆಗಳಾಗಿವೆ.
ಸಿಐಎ ಸಮರ್ಥನೆಯನ್ನು ಬಿಜೆಪಿ ಸಂವಾದ ಘಟಕದ ಮಾಜಿ ರಾಷ್ಟ್ರೀಯ ಸಂಚಾಲಕ ಖೇಮ್ ಚಂದ್ ಶರ್ಮಾ ತಿರಸ್ಕರಿಸಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಸಿಎಐ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New DelhiVHPCIAಸಿಐಎBajrang Dalನವ ದೆಹಲಿWorld FactbookReligious militantವರ್ಲ್ಡ್ ಫ್ಯಾಕ್ಟ್ಬುಕ್ವಿಹೆಚ್ಪಿಬಜರಂಗ ದಳ \'ಧಾರ್ಮಿಕ ಉಗ್ರ ಸಂಘಟನೆಗಳು\'!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


