ಭಾರತದಲ್ಲಿ ಜೂನ್ 16ರಂದು ಈದ್ ಆಚರಣೆ
ಜೂನ್ 16ರಂದು ದೇಶಾದ್ಯಂತ ಈದ್ ಉಲ್ ಫಿತರ್ ಅನ್ನು ಆಚರಿಸಲಾಗುವುದು ಎಂದು ಜಮಾ ಮಸೀದಿಯ ಶಾಹಿ...

Published On :
ನವದೆಹಲಿ: ಜೂನ್ 16ರಂದು ದೇಶಾದ್ಯಂತ ಈದ್ ಉಲ್ ಫಿತರ್ ಅನ್ನು ಆಚರಿಸಲಾಗುವುದು ಎಂದು ಜಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಕಾರಿ ಅವರು ಗುರುವಾರ ಹೇಳಿದ್ದಾರೆ.
ಇಂದು ದೇಶಾದ್ಯಂತ ಚಂದ್ರ ಕಾಣಿಸಿಕೊಳ್ಳುವ ಯಾವುದೇ ಸೂಚನೆ ಸಿಕ್ಕಿಲ್ಲ. ಹೀಗಾಗಿ ಶನಿವಾರ ರಂಜಾನ್ ಆಚರಿಸಲಾಗುವುದು ಎಂದು ಬುಕಾರಿ ತಿಳಿಸಿದ್ದಾರೆ.
ರಂಜಾನ್ ಮುಸ್ಲಿಮರ ಪವಿತ್ರ ತಿಂಗಳು ಮತ್ತು ಈ ಮಾಸವನ್ನು ‘ಕುರಾನಿನ ಮಾಸ’ವೆಂದು ಕರೆಯುವರು. ಕುರಾನ್ ನಂಬುವವರ ಪಾಲಿಗೆ ಈ ತಿಂಗಳನ್ನು ಕೃತಜ್ಞತೆಯ ತಿಂಗಳಾಗಿ ಮಾಡಲಾಗಿದೆ. ಇಡೀ ತಿಂಗಳಲ್ಲಿ ಉಪವಾಸ ವ್ರತವನ್ನಾಚರಿಸಲು ಆದೇಶಿಸಲಾಗಿದೆ.
ರಂಜಾನ್ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


