ಕೊಚ್ಚಿ: ಸರಕು ಸಾಗಣೆ ಹಡಗು ಬೆಂಕಿಗಾಹುತಿ: 22 ಸಿಬ್ಬಂದಿ ಅಪಾಯದಿಂದ ಪಾರು
ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಸ್ಥಳೀಯ ಸರಕು ಸಾಗಣೆ ಹಡಗೊಂದು ಬೆಂಕಿ ಅವಘಡಕ್ಕೆ ಈಡಾಗ ಘಟನೆ ಕೇರಳದ ಕೊಚ್ಚಿ ಸಮೀಪ ನಡೆದಿದೆ.

Published On :
ಕೊಚ್ಚಿ(ಕೇರಳ): ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಸ್ಥಳೀಯ ಸರಕು ಸಾಗಣೆ ಹಡಗೊಂದು ಬೆಂಕಿ ಅವಘಡಕ್ಕೆ ಈಡಾದ ಘಟನೆ ಕೇರಳದ ಕೊಚ್ಚಿ ಸಮೀಪ ನಡೆದಿದೆ.
ಬೆಂಕಿ ಅವಘಡಕ್ಕೀಡಾದ ಹಡಗಿನಲ್ಲಿ ಸಿಬ್ಬಂದಿಗಳು ಸೇರಿ 22 ಮಂದಿ ಇದ್ದುದಾಗಿ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆ ಯೋಧರು ಅವಘಡಕ್ಕೀಡಾದ ಹಡಗಿನತ್ತ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಎಲ್ಲಾ 22 ಜನರನ್ನೂ ರಕ್ಷಿಸಲಾಗಿದೆ.
ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್ ಅನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಕಳೆದ ರಾತ್ರಿ ಸ್ಪೋಟದೊಡನೆ ಬೆಂಕಿ ಕಾಣಿಸಿದೆ. ಹೀಗೆ ಬೆಂಕಿ ಅವಘಡಕ್ಕೀಡಾದ ಮೂರು ತಾಸಿನಲ್ಲಿ ರಕ್ಷಣಾ ಪಡೆ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಸಧ್ಯ ಯಾವ್ಚ ಜೀವಹಾನಿ ಸಂಭವಿಸಲಿಲ್ಲ.
ಸಮುದ್ರದ ಭಾಗದಲ್ಲಿದ್ದ ಬಲವಾದ ಗಾಳಿಯ ಕಾರಣ ಬೆಂಕಿಯು ಬೇಗನೇ ಹರಡಿದ್ದು ಹಡಗಿನ ಶೇ.70 ಭಾಗ ಸುಟ್ಟು ಹೋಗಿದೆ ಎಂದು ಮೂಲಗಳು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಿಬ್ಬಂದಿcrew membersCoast Guardfire in vesselSSL KOLKATAಹಡಗಿನಲ್ಲಿ ಬೆಂಕಿಕರಾವಳಿ ರಕ್ಷಣಾಪಡೆಎಸ್ಎಸ್ಎಲ್ ಕೊಲ್ಕತ್ತಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


