ಸ್ವಯಂಘೋಷಿತ ಧರ್ಮ ಗುರು ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!
ಸ್ವಯಂ ಘೋಷಿತ ದೇವಮಾನವ ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ...

Published On :
ಇಂದೋರ್: ಸ್ವಯಂ ಘೋಷಿತ ದೇವಮಾನವ ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುಂಡು ಹಾರಿಸಿಕೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬೈಯ್ಯಾಜಿ ಮಹಾರಾಜ್ ರನ್ನು ಕೂಡಲೇ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಅನುಯಾಯಿಗಳನ್ನು ಹೊಂದಿರುವ ಮಹಾರಾಜ್ 2016ರ ಏಪ್ರಿಲ್ ನಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷದ ಏಪ್ರಿಲ್ ನಲ್ಲಿ ಮಧ್ಯಪ್ರದೇಶ ಸರ್ಕಾರ ಅವರಿಗೆ ಸಚಿವರ ಸ್ಥಾನಮಾನ ನೀಡಿ ಗೌರವಿಸಿತ್ತು.
ಭಯ್ಯಾಜಿ ಅವರ ಮೂಲ ಹೆಸರು ಉದಯಸಿನ್ಹ ದೇಶ್ ಮುಖ್. ಸ್ವಯಂಘೋಷಿತ ಮಾನವ ಎಂದು ಘೋಷಣೆ ನಂತರ ಅವರು ಭಯ್ಯೂಜಿ ಮಹಾರಾಜ್ ಎಂದೇ ಖ್ಯಾತರಾಗಿದ್ದರು. ಸದ್ಗುರು ದತ್ತ ಧಾರ್ಮಿಕ್ ಏವಂ ಪಾರಮಾರ್ಥಿಕ್ ಟ್ರಸ್ಟ್ ಮತ್ತು ಸೂರ್ಯೋದಯ ಆಶ್ರಮದಂತಹ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ.
2011ರಲ್ಲಿ ಅಣ್ಣಾ ಹಜಾರೆಯವರು ಲೋಕಪಾಲ ವಿಧೇಯಕಕ್ಕಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಘೋಷಿಸಿದಾಗ ಭಯ್ಯೂಜಿ ಮಹಾರಾಜ್ ದೇಶದ ಗಮನ ಸೆಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆತ್ಮಹತ್ಯೆSuicideMadhya Pradeshಮಧ್ಯಪ್ರದೇಶಸ್ವಯಂಘೋಷಿತ ದೇವಮಾನವSpritual GuruBhaiyyuji Maharajಭಯ್ಯೂಜಿ ಮಹಾರಾಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


