ದೇಶ

ದಲೈ ಲಾಮಾ ಆರೋಗ್ಯವಾಗಿದ್ದಾರೆ: ಪ್ರಾಸ್ಟೇಟ್‌ ಕ್ಯಾನ್ಸರ್‌ ವರದಿ ತಳ್ಳಿಹಾಕಿದ ವೈಯಕ್ತಿಕ ವೈದ್ಯ

ಬೌದ್ಧ ಧರ್ಮಗುರು ದಲೈ ಲಾಮಾ(82)ಅವರು ಪ್ರಾಸ್ಟೇಟ್‌ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ...

ದಲೈ ಲಾಮಾ ಆರೋಗ್ಯವಾಗಿದ್ದಾರೆ: ಪ್ರಾಸ್ಟೇಟ್‌ ಕ್ಯಾನ್ಸರ್‌ ವರದಿ ತಳ್ಳಿಹಾಕಿದ ವೈಯಕ್ತಿಕ ವೈದ್ಯ
ದಲೈ ಲಾಮಾ
Published On :
ನವದೆಹಲಿ: ಬೌದ್ಧ ಧರ್ಮಗುರು ದಲೈ ಲಾಮಾ(82)ಅವರು ಪ್ರಾಸ್ಟೇಟ್‌ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಯನ್ನು ಅವರ ವೈಯಕ್ತಿಕ ವೈದ್ಯ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. 
'ಅದೊಂದು ನಕಲಿ ಸುದ್ದಿ ಎಂದಿರುವ ದಲೈ ಲಾಮಾ ಅವರ ವೈಯಕ್ತಿಕ ವೈದ್ಯ ಡಾ. ಟ್ಸೆಟೆನ್ ಡೊರ್ಜಿ ಅವರು, ಬೌದ್ಧ ಗುರು ಆರೋಗ್ಯವಾಗಿದ್ದಾರೆ. ಒಂದು ವೇಳೆ ಅವರು ಆರೋಗ್ಯವಾಗಿರದಿದ್ದರೆ ಸತತ ಮೂರು ದಿನಗಳ ಕಾಲ ಉಪನ್ಯಾಸಗಳನ್ನು ನೀಡುತ್ತಿರಲಿಲ್ಲ ಹಾಗೂ ಲಾಟ್ವಿಯಾ ಮತ್ತು ಲಿಥುವೇನಿಯಾಗೆ ಈ 10 ದಿನಗಳ ಪ್ರವಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 
ದಲೈ ಲಾಮಾ ಅವರು ಕಳೆದ ಎರಡು ವರ್ಷಗಳಿಂದ ಪ್ರಾಸ್ಟೇಟ್‌ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅದಕ್ಕೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಈ ವಿಷಯ ಭಾರತ, ಚೀನಾ ಗುಪ್ತಚರ ಸಂಸ್ಥೆಗಳಿಗೂ ತಿಳಿದಿದೆ ಎಂದು ಮೂಲಗಳು ತಿಳಿಸಿದೆ ಎಂದು ವೆಬ್ ಸೈಟ್ ವೊಂದು ವರದಿ ಮಾಡಿತ್ತು. ಆದರೆ, ಕೇಂದ್ರೀಯ ಟಿಬೆಟಿಯನ್‌ ಆಡಳಿತ(ಸಿಎಟಿ) ಈ ವಿಷಯವನ್ನು ತಳ್ಳಿ ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.