ಪ್ರಧಾನಿ ಮೋದಿ ಹತ್ಯೆಗೆ ನಕ್ಸಲೀಯರ ಸಂಚು: ತನಿಖೆ ನಡೆಸಿ, ರಾಜಕೀಯಗೊಳಿಸಬೇಡಿ- ಕಾಂಗ್ರೆಸ್
ಪ್ರಧಾನಿ ನರೇಂದ್ರಮೋದಿ ಹತ್ಯೆಗೆ ನಕ್ಸಲೀಯರು ಸಂಚು ರೂಪಿಸಿದ್ದರು ಎಂಬ ವರದಿ ಬಗ್ಗೆ ತನಿಖೆ ನಡೆಯಬೇಕು. ಈ ವಿಷಯವನ್ನು ರಾಜಕೀಯಗೊಳಿಸದೆ ಸ್ಪಷ್ಟಪಡಿಸಬೇಕೆಂದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Published On :
ನವದೆಹಲಿ: ಪ್ರಧಾನಿ ನರೇಂದ್ರಮೋದಿ ಹತ್ಯೆಗೆ ನಕ್ಸಲೀಯರು ಸಂಚು ರೂಪಿಸಿದ್ದರು ಎಂಬ ವರದಿ ಬಗ್ಗೆ ತನಿಖೆ ನಡೆಯಬೇಕು. ಈ ವಿಷಯವನ್ನು ರಾಜಕೀಯಗೊಳಿಸದೆ ಸ್ಪಷ್ಟಪಡಿಸಬೇಕೆಂದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪ್ರಧಾನಿ ವಿರುದ್ಧ ಬೆದರಿಕೆ ವದಂತಿಯಾಗಿದ್ದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ವಕ್ತಾರ ಪವನ್ ಖೇರ್ ದೆಹಲಿಯಲ್ಲಿಂದು ಸುದ್ದಿಗಾರರಿಗೆ ಹೇಳಿದರು.
ಸಮಸ್ಯೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ " ಎಂಬ ಅಂಶವನ್ನು ಉಲ್ಲೇಖಿಸಿದ ಅವರು, ಸಣ್ಣ ರಾಜಕೀಯಕ್ಕಾಗಿ ಪ್ರಧಾನಮಂತ್ರಿಗೆ ಬೆದರಿಕೆಯನ್ನು ಬಳಸಬೇಡಿ" ಎಂದು ಹೇಳಿದರು.
ನಾವು ಇಬ್ಬರು ಪ್ರಧಾನಮಂತ್ರಿಯನ್ನು ಕಳೆದುಕೊಂಡಿದ್ದೀವಿ.ಛತ್ತೀಸ್ ಗಢ ಹಿಂಸಾಚಾರದಲ್ಲಿ ಇಡೀ ನಾಯಕತ್ವವನ್ನೇ ಕಳೆದುಕೊಂಡಿದ್ದೀವಿ. ಭಯೋತ್ಪಾದನೆ, ನಕ್ಸಲೀಯರ ವಿರುದ್ಧದ ಹೋರಾಟ ನಮಗೆ ಗೊತ್ತಿಗೆ. ಆದರೆ, ರಾಜಕೀಯದೊಂದಿಗೆ ಆಟವಾಡಲಿಲ್ಲ. ಛತ್ತೀಸ್ ಗಢದಲ್ಲಿ ತಮ್ಮ ನಾಯಕನನ್ನು ಕಳೆದುಕೊಂಡಾಗ ಬಿಜೆಪಿ ಅಧಿಕಾರದಲ್ಲಿತ್ತು . ಆದರೆ ನಾವು ರಾಜಕೀಯ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಪ್ರಧಾನಿ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಐವರ ಪೈಕಿ ದೆಹಲಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಯಿಂದ ಪತ್ರವೊಂದವನ್ನು ವಶಪಡಿಸಿಕೊಂಡಿರುವುದಾಗಿ ಪುಣೆ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅಲ್ಲದೇ ನಿಷೇಧಿತ ಸಿಪಿಐ( ಎಂ)ನೊಂದಿಗೆ ಇವರು ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿಯೇ ಪ್ರಧಾನಿ ನರೇಂದ್ರಮೋದಿಯನ್ನು ಹತ್ಯೆ ಮಾಡುವ ಬಗ್ಗೆ ಆ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


