ದೇಶ

ದೆಹಲಿ: ಪೊಲೀಸ್ ಎನ್ ಕೌಂಟರ್ ಗೆ 4 ಶಂಕಿತ ಭೂಗತ ಪಾತಕಿಗಳ ಸಾವು!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಪೊಲೀಸರು ಭೀಕರ ಎನ್ ಕೌಂಟರ್ ಮಾಡಿದ್ದು, ಘಟನೆಯಲ್ಲಿ ಶಂಕಿತ 4 ಮಂದಿ ಭೂಗತ ಪಾತಕಿಗಳು ಹತರಾಗಿದ್ದಾರೆ.

ದೆಹಲಿ: ಪೊಲೀಸ್ ಎನ್ ಕೌಂಟರ್ ಗೆ 4 ಶಂಕಿತ ಭೂಗತ ಪಾತಕಿಗಳ ಸಾವು!
ಪಾತಕಿಗಳಿದ್ದ ಕಾರು
Published On :
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಪೊಲೀಸರು ಭೀಕರ ಎನ್ ಕೌಂಟರ್ ಮಾಡಿದ್ದು, ಘಟನೆಯಲ್ಲಿ ಶಂಕಿತ 4 ಮಂದಿ ಭೂಗತ ಪಾತಕಿಗಳು ಹತರಾಗಿದ್ದಾರೆ.
ದಕ್ಷಿಣ ದೆಹಲಿಯ ಚತಾರ್ ಪುರ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಈ ಎನ್ ಕೌಂಟರ್ ಮಾಡಿದ್ದು, ಈ ವೇಳೆ ನಾಲ್ಕು ಮಂದಿ ಶಂಕಿತ ಭೂಗತ ಪಾತಕಿಗಳು ಹತರಾಗಿದ್ದಾರೆ. ಅಂತೆಯೇ ಮೂವರು ಪೊಲೀಸರಿಗೂ ಘಟನೆಯಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. 
ಇನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾದ ಶಂಕಿತರು ಭೂಗತ ಪಾತಕಿ ರಾಜೇಶ್ ಭಾರ್ತಿ ಗ್ಯಾಂಗ್ ನವರು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ಪ್ರಸ್ತುತ ಹತರಾದ ಶಂಕಿತ ಪಾತಗಳ ಮೇಲೆ ಪೊಲೀಸ್ ಇಲಾಖೆ ನಗದು ಬಹುಮಾನ ಘೋಷಣೆ ಮಾಡಿತ್ತು. ಇನ್ನು ಭೂಗತ ಪಾತಕಿ ರಾಜೇಶ್ ಭಾರ್ತಿ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ  ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.