ಕಾಶ್ಮೀರ: ಸೇನಾ ವಾಹನಗಳ ಮೇಲೆ ಉಗ್ರರ ದಾಳಿ, ಇಬ್ಬರು ಯೋಧರಿಗೆ ಗಾಯ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಉಪಟಳ ಮತ್ತೆ ಮುಂದುವರೆದಿದ್ದು, ಕೆರಾನ್ ಸೆಕ್ಟರ್ ನಲ್ಲಿ ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಉಪಟಳ ಮತ್ತೆ ಮುಂದುವರೆದಿದ್ದು, ಕೆರಾನ್ ಸೆಕ್ಟರ್ ನಲ್ಲಿ ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾವಾಹನದ ಮೇಲೆ ಉಗ್ರರು ದಾಳಿ ಈ ವೇಳೆ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದಬಂದಿದೆ. ಪ್ರಸ್ತುತ ಗಾಯಾಳು ಸೈನಿಕರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಗ್ರ ಮೇಲೆ ಯೋಧರು ಪ್ರತಿದಾಳಿ ನಡೆಸಿದ್ದಾರೆ.
ಬಂಡಿಪೋರದಲ್ಲಿ ಉಗ್ರರ ಅಡಗುತಾಣದ ಮೇಲೆ ಸೇನೆ ದಾಳಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ
ಇತ್ತ ಬಂಡಿಪೋರದಲ್ಲಿ ಉಗ್ರರ ಅಡುಗುತಾಣದ ಮೇಲೆ ಸೇನೆ ದಾಳಿ ನಡೆಸಿದ್ದು, ಈ ವೇಳೆ ಉಗ್ರರು ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಂದು ಎಕೆ 47 ರೈಫಲ್, ಜೀವಂತ ಗುಂಡುಗಳಿರುವ 8 ಕಾರ್ಟ್ ರಿಡ್ಜ್ ಗಳು, 2 ಪಿಸ್ತೂಲು, 2 ವಾಕಿ ಟಾಕಿ, ಬೈನಾಕ್ಯುಲರ್, ಉಗ್ರ ಸಂಘಟನೆಯ ಕರಪತ್ರಗಳು ಸೇರಿದಂತೆ ಹಲವು ಶಂಸಾಸ್ಪದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಶ್ರೀನಗರSrinagarಜಮ್ಮು ಮತ್ತು ಕಾಶ್ಮೀರTerror AttackJammu and Kashmirಭಾರತೀಯ ಸೇನೆಉಗ್ರ ದಾಳಿBandiporaಬಂಡಿಪೋರಾKeran Sectorಕೆರಾನ್ ಸೆಕ್ಚರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


