ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ, ಆರ್ ಎಸ್ಎಸ್ ಸೀಮಿತ ಸಂಘಟನೆಯಲ್ಲ: ಮೋಹನ್ ಭಾಗ್ವತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಮಾಜದ ಎಲ್ಲ ವರ್ಗದವರನ್ನೂ ಜೊತೆಗೂಡಿಸಲು ಇರುವ ಸಂಘಟನೆಯಾಗಿದ್ದು ಯಾವುದೇ ಒಂದು ವರ್ಗ, ಸಮಾಜಕ್ಕೆ ಸೀಮಿತವಾದ ಸಂಘಟನೆಯಲ್ಲ

Published On :
ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಮಾಜದ ಎಲ್ಲ ವರ್ಗದವರನ್ನೂ ಜೊತೆಗೂಡಿಸಲು ಇರುವ ಸಂಘಟನೆಯಾಗಿದ್ದು ಯಾವುದೇ ಒಂದು ವರ್ಗ, ಸಮಾಜಕ್ಕೆ ಸೀಮಿತವಾದ ಸಂಘಟನೆಯಲ್ಲ ಎಂದು ಆರ್ ಎಸ್ಎಸ್ ನ ಸರಸಂಘಚಾಲಕ ಮೋಹನ್ ಭಾಗ್ವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಸಂಘ ಶಿಕ್ಷಾ ವರ್ಗ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿರುವ ಮಾಡಿರುವ ಮೋಹನ್ ಭಾಗ್ವತ್ ಸಮಾಜದ ಆರ್ ಎಸ್ಎಸ್ ದೇಶಕ್ಕಾಗಿ ಸೇವೆ ಸಲ್ಲಿಸಲು ಇರುವ ಸಂಘಟನೆಯಾಗಿದ್ದು ತನ್ನ ನಡವಳಿಕೆಯಿಂದಲೇ ಉದಾಹರಣೆ ನೀಡುವ ಸಂಘಟನೆಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಣಬ್ ಮುಖರ್ಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳಿಗೂ ಉತ್ತರ ನೀಡಿರುವ ಮೋಹನ್ ಭಾಗ್ವತ್ ಸಂಘದ ಸಂಸ್ಥಾಪಕರಾದ ಹೆಡಗೆವಾರರೂ ಕಾಂಗ್ರೆಸ್ಸಿಗಾರಾಗಿಯೇ ಜೈಲಿಗೆ ಹೋಗಿದ್ದವರು, ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ.
ಭಾರತೀಯರೆಲ್ಲರೂ ಒಂದೇ ಪೂರ್ವಜರ ಪರಂಪರೆ ಹೊಂದಿದ್ದಾರೆ. ಪ್ರತಿ ಭಾರತೀಯನೂ ಮಾತೃಭೂಮಿಯನ್ನು ಪೂಜಿಸುತ್ತಾನೆ, ಸಂಘದಲ್ಲಿ ಪ್ರಜಾಪ್ರಭುತ್ವದ ಮನಸ್ಥಿತಿ ಇರುವುದರಿಂದಲೇ ಆರ್ ಎಸ್ ಎಸ್ ಅಸ್ಥಿತ್ವದಲ್ಲಿದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


