ದೇಶ

ಭೀಮಾ-ಕೊರೆಗಾಂವ್ ದಂಗೆಯಲ್ಲಿ ಭಾಗಿ ಶಂಕೆ: ನಾಲ್ವರು ಮಾವೊವಾದಿಗಳ ಬಂಧನ

ನಾಗ್ಪುರ, ದೆಹಲಿ ಮತ್ತು ಮುಂಬೈ ನಗರಗಳಿಂದ ನಾಲ್ಕು ಪ್ರಮುಖ ಮಾವೊವಾದಿ ಕಾರ್ಯನಿರ್ವಹಕರನ್ನು ...

ಭೀಮಾ-ಕೊರೆಗಾಂವ್ ದಂಗೆಯಲ್ಲಿ ಭಾಗಿ ಶಂಕೆ: ನಾಲ್ವರು ಮಾವೊವಾದಿಗಳ ಬಂಧನ
ದಂಗೆಯಲ್ಲಿ ಸ್ಪೋಟಗೊಂಡ ವಾಹನಗಳು
Published On :

ಮುಂಬೈ: ನಾಗ್ಪುರ, ದೆಹಲಿ ಮತ್ತು ಮುಂಬೈ ನಗರಗಳಿಂದ ನಾಲ್ಕು ಪ್ರಮುಖ ಮಾವೊವಾದಿ ಕಾರ್ಯನಿರ್ವಹಕರನ್ನು ಪುಣೆ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.

ದೆಹಲಿಯ ರೊಣಾ ವಿಲ್ಸನ್, ನಾಗ್ಪುರದ ಅಡ್ವು ಸುರೇಂದ್ರ ಗಾಡ್ಲಿಂಗ್ ಮತ್ತು ಪ್ರೊ ಶೊಮ ಸೆನ್, ಮುಂಬೈಯ ಸುದೀರ್ ದಾವ್ಲೆ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ನಕ್ಸಲೀಯರ ಮನೆ ಮತ್ತು ಕಚೇರಿಗ ಮೇಲೆ ಈ ವರ್ಷದ ಆರಂಭದಲ್ಲಿ ಭೀಮಾ-ಕೊರೆಗಾಂವ್ ದಂಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ  ನಡೆಸಲಾಗಿತ್ತು.

ದಾಳಿ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷಿಗಳನ್ನು ಆಧರಿಸಿ ಈ ನಾಲ್ವರನ್ನು ಬಂಧಿಸಲಾಗಿದ್ದು ಪುಣೆಯ ಶನಿವಾರ್ ವಾಡಾದಲ್ಲಿ ಎಲ್ಗಾರ್ ಪರಿಶತ್ ನಲ್ಲಿ ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಉದ್ವಿಗ್ನ ಪರಿಸ್ಥಿತಿಯನ್ನು ಹುಟ್ಟುಹಾಕಿ ಭೀಮಾ-ಕೊರೆಗಾಂವ್ ದಂಗೆಗೆ ಕಾರಣವಾಗಿತ್ತು.

ಭೀಮಾ-ಕೊರೆಗಾಂವ್ ದಂಗೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಹಿಂದೂ ಏಕತಾ ಅಗಡಿ ಸ್ಥಾಪಕ ಮಿಲಿಂಗ್ ಏಕ್ಬೊಟೆಯನ್ನು ಬಂಧಿಸಿದ್ದಲ್ಲದೆ ಕಾರ್ಯಕರ್ತ ಕಬೀರ್ ಕಾಲಾ ಮಚ್ ನನ್ನು ಕೂಡ ವಿಚಾರಣೆ ನಡೆಸಿದ್ದರು. ಇಂದಿನ ಬಂಧಿತರು ಭೀಮಾ ಕೊರೆಗಾಂವ್ ದಂಗೆ ಪ್ರಕರಣಕ್ಕೆ ನೇರ ಸಂಪರ್ಕ ಇದ್ದಿರಬಹುದಾದ್ದರಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.