ಎಫ್ ಐ ಆರ್ ದಾಖಲಿಸಿಲ್ಲ, ನನ್ನ ವಿರುದ್ಧ ಇನ್ನೂ ತನಿಖೆ : ಇಡಿ ವಿಚಾರಣೆಗೆ ಚಿದಂಬರಂ ಹೇಳಿಕೆ
ಏರ್ ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರನ್ನು ವಿಚಾರಣೆ ನಡೆಸಿದೆ

ನವದೆಹಲಿ: ಏರ್ ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರನ್ನು ವಿಚಾರಣೆ ನಡೆಸಿದ್ದು, ತನಿಖಾ ದಳಕ್ಕೆ ಎಲ್ಲಾ ಉತ್ತರವನ್ನು ನೀಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ಅದು ಈಗಾಗಲೇ ದಾಖಲಾಗಿದೆ.
ಆರು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು ದೋಷವಿಲ್ಲದೆ ಉತ್ತರ ಟೈಪ್ ಮಾಡಲು, ಹೇಳಿಕೆ ಓದಲು ಹಾಗೂ ಪಠಣ ಮಾಡಲು ತೆಗೆದುಕೊಳ್ಳಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಇಂದು ಚಿದಂಬರಂ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ.
3, 500 ಕೋಟಿ ಮೊತ್ತದ ಏರ್ ಸೆಲ್- ಮ್ಯಾಕ್ಸಿಲ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಚಿದಂಬರಂ ಅವರ ಪಾತ್ರ ಕೇಳಿಬಂದಿತ್ತು.
ಜಾರಿನಿರ್ದೇಶನಾಲಯದಿಂದ ಬಂಧನದಿಂದ ಪಾರು ಮಾಡುವಂತೆ ಕಳೆದ ವಾರ ಚಿದಂಬರಂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ ಪಿ ಸೈನಿ ಬಳಿ ಮನವಿ ಮಾಡಿಕೊಂಡಿದ್ದರು. ಜುಲೈ 10 ರವೆರೆಗೂ ಅವರನ್ನು ಬಂಧಿಸದಂತೆ ಇದೇ ನ್ಯಾಯಾಲಯ ಇಂದು ಇಡಿಗೆ ನಿರ್ದೇಶನ ನಿರ್ದೇಶಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


