ದೇಶ

ಸೀತೆ ಪ್ರಣಾಳ ಶಿಶು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ವಿರುದ್ಧ ದೂರು ದಾಖಲು

ರಾಮಾಯಣದಲ್ಲಿನ ಸೀತೆ ಭಾರತದ ಮೊದಲ ಪ್ರಣಾಳ ಶಿಶು ಎಂದು ಹೇಳಿಕೆ ನೀಡುವ ಮೂಲಕ ಅವಮಾನಿಸಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ವಿರುದ್ಧ ಬಿಹಾರದ ಸಿತಾಮಾರ್ಹಿ ಜಿಲ್ಲೆಯಲ್ಲಿ ದೂರು ದಾಖಲಿಸಲಾಗಿದೆ.

ಸೀತೆ ಪ್ರಣಾಳ ಶಿಶು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ವಿರುದ್ಧ ದೂರು ದಾಖಲು
ಡಿಸಿಎಂ ದಿನೇಶ್ ಶರ್ಮಾ
Published On :

ಪಾಟ್ನಾ: ರಾಮಾಯಣದಲ್ಲಿನ ಸೀತೆ ಭಾರತದ ಮೊದಲ ಪ್ರಣಾಳ ಶಿಶು  ಎಂದು ಹೇಳಿಕೆ ನೀಡುವ ಮೂಲಕ ಅವಮಾನಿಸಲಾಗಿದೆ ಎಂದು ಆರೋಪಿಸಿ  ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ವಿರುದ್ಧ ಬಿಹಾರದ ಸಿತಾಮಾರ್ಹಿ  ಜಿಲ್ಲೆಯಲ್ಲಿ  ದೂರು ದಾಖಲಿಸಲಾಗಿದೆ.

ಈ ಸಂಬಂಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕೀಲ ಚಂದನ್ ಕುಮಾರ್ ಸಿಂಗ್ ದೂರು ದಾಖಲಿಸಿದ್ದು,  ಜೂನ್  8 ರಂದು ವಿಚಾರಣೆ ನಡೆಯಲಿದೆ.

 ದಿನೇಶ್  ಶರ್ಮಾ  ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ,  ದೇಶದ ಶ್ರೀಮಂತ ಪರಂಪರೆ,  ಸಂಸ್ಕೃತಿ, ಸಂಪ್ರದಾಯವನ್ನು ಅವಮಾನಿಸಿದ್ದಾರೆ ಎಂದು    ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.

"ಶರ್ಮ ಹೇಳಿಕೆಯು ಒಂದು ನಿರ್ದಿಷ್ಟ ಧರ್ಮದ ಮನೋಭಾವವನ್ನು ನೋಯಿಸುವ ಮತ್ತು ಅವಮಾನಿಸುವ ಒಳ್ಳೆಯ ಯೋಜಿತ ರಾಜಕೀಯ ಮತ್ತು ಕ್ರಿಮಿನಲ್ ಪಿತೂರಿಯ ಭಾಗವಾಗಿದೆ. ಬಿಜೆಪಿ ನಾಯಕನ ತರ್ಕಬದ್ಧ ಪರಿಕಲ್ಪನೆಯು ಹಿಂದು ಧರ್ಮವನ್ನು ಹಾಸ್ಯಾಸ್ಪದವಾಗಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

 ಉತ್ತರ ಪ್ರದೇಶದ ಮಥೂರದಲ್ಲಿ ಕೌಶಾಲ್ಯಾಭಿವೃದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶರ್ಮಾ, ಸೀತೆ ಮಣ್ಣಿನ ಕುಡಿಕೆಯಿಂದ ಜನಿಸಿದ್ದು, ಆ ಸಂದರ್ಭದಲ್ಲಿ ಪ್ರಣಾಳ ಶಿಶು ಯೋಜನೆ ಪ್ರಗತಿಯಲ್ಲಿತ್ತು.
ಜನಕ ರಾಜ ಭೂಮಿ ಉಳುತ್ತಿದ್ದಾಗ ಸೀತೆ ಸಿಕ್ಕಿದ್ದಳು.  ಇದೇ ತಂತ್ರಜ್ಞಾನವನ್ನು ಪ್ರಣಾಳ ಶಿಶು ಎಂದು ಕರೆಯಲಾಗುತ್ತೆ ಎಂದು ಹೇಳಿಕೆ ನೀಡಿದ್ದ. ಇದು ವಿವಾದಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.