ಐಪಿಎಲ್ ಬೆಟ್ಟಿಂಗ್ ಕೇಸ್: ಪೊಲೀಸರ ಮುಂದೆ ಹಾಜರಾದ ನಟ ಅರ್ಬಾಜ್ ಖಾನ್
ಐಪಿಎಲ್ ಬೆಟ್ಟಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ದಾಖಲಿಸಲು ಬಾಲಿವುಡ್ ...

ಥಾಣೆ: ಐಪಿಎಲ್ ಬೆಟ್ಟಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆ ದಾಖಲಿಸಲು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಶನಿವಾರ ಪೊಲೀಸ್ ಠಾಣೆ ಮುಂದೆ ಹಾಜರಾಗಿದ್ದಾರೆ.
ಐಪಿಎಲ್ ದಂಧೆ ಆರೋಪಕ್ಕೆ ಸಂಬಂಧಪಟ್ಟಂತೆ ಹೇಳಿಕೆ ದಾಖಲಿಸಿಕೊಳ್ಳಲು ನಿನ್ನೆ ಥಾಣೆ ಪೊಲೀಸರು ಅರ್ಬಾಜ್ ಖಾನ್ ಗೆ ಸಮ್ಮನ್ಸ್ ಜಾರಿ ಮಾಡಿದ್ದರು.
ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬುಕ್ಕಿಯೊಬ್ಬನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗುವಂತೆ ಅರ್ಬಾಸ್ ಖಾನ್ ಗೆ ಕಳುಹಿಸಿರುವ ಪತ್ರದಲ್ಲಿ ಪೊಲೀಸರು ಸೂಚನೆ ನೀಡಿದ್ದರು.
ಇಂದು ಬೆಳಗ್ಗೆ ಥಾಣೆ ಪೊಲೀಸ್ ಠಾಣೆಯ ಬಲತ್ಕಾರದಿಂದ ಹಣ ಸುಲಿಗೆ ವಿರೋಧಿ ಕೋಶದ ಮುಂದೆ ಅರ್ಬಾಜ್ ಖಾನ್ ಹೇಳಿಕೆ ನೀಡಲು ಹಾಜರಾದರು ಎಂದು ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.
ಕಳೆದ ಮೇ 15ರಂದು ಮುಂಬೈಯಲ್ಲಿ ಸೋನು ಜಲಾನ್ ಅಲಿಯಾಸ್ ಸೋನು ಮಲಾಡ್ ಹಾಗೂ ಇತರ ಮೂವರನ್ನು ಬಂಧಿಸುವ ಮೂಲಕ ಬೆಟ್ಟಿಂಗ್ ದಂಧೆಯನ್ನು ಪೊಲೀಸರು ಬೇಧಿಸಿದ್ದರು.ಈತನ ತನಿಖೆ ವೇಳೆ ಅರ್ಬಾಜ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ತಿಳಿಸಿದ್ದಾರೆ.
ಐಪಿಎಲ್ ಮ್ಯಾಚ್ ನಲ್ಲಿ ಅರ್ಬಾಜ್ ಖಾನ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಅವರ ಬ್ಯಾಂಕ್ ವಹಿವಾಟುಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬೆಟ್ಟಿಂಗ್ ನಲ್ಲಿ ಅರ್ಬಾಜ್ ಖಾನ್ 2.80 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದು ಜಲಾನ್ ಗೆ ಹಣ ನೀಡಿರಲಿಲ್ಲ. ಇದರಿಂದಾಗಿ ಬುಕ್ಕಿಗಳು ನಟನಿಗೆ ಬೆದರಿಕೆಯೊಡ್ಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


