ದೇಶ

ಗೆಲುವು, ಸೋಲುಗಳಿಂದ ಪಕ್ಷಗಳು ಮೌಲ್ಯಯುತ ಪಾಠಗಳನ್ನು ಕಲಿಯಬೇಕು; ರಾಹುಲ್ ಗಾಂಧಿ

ಚುನಾವಣೆಯಲ್ಲಿ ಗೆಲುವು ಹಾಗೂ ಸೋಲುಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಮೌಲ್ಯಯುತ ಪಾಠಗಳನ್ನು ಕಲಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ...

ಗೆಲುವು, ಸೋಲುಗಳಿಂದ ಪಕ್ಷಗಳು ಮೌಲ್ಯಯುತ ಪಾಠಗಳನ್ನು ಕಲಿಯಬೇಕು; ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ಚುನಾವಣೆಯಲ್ಲಿ ಗೆಲುವು ಹಾಗೂ ಸೋಲುಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಮೌಲ್ಯಯುತ ಪಾಠಗಳನ್ನು ಕಲಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ. 
ದೇಶದ 4 ಲೋಕಸಭೆ ಕ್ಷೇತ್ರಗಳು ಹಾಗೂ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದ್ದು, ಚುನಾವಣಾ ಫಲಿತಾಂಶ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಗೆಲವು ಸಾಧಿಸಿದ ರಾಜಕೀಯ ಪಕ್ಷಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. 
ಚುನಾವಣೆಯಲ್ಲಿ ಗೆಲವು ಸಾಧಿಸಿದ ಪ್ರತಿಯೊಬ್ಬ ವಿಜೇತರಿಗೂ ಶುಭಾಶಯಗಳನ್ನು ಹೇಳಲು ಇಚ್ಛಿಸುತ್ತೇನೆ. ಚುನಾವಣೆಯ ಗೆಲವು ಹಾಗೂ ಸೋಲುಗಳಿಂದ ಎಲ್ಲಾ ಪಕ್ಷಗಳು ಮೌಲ್ಯಯುತ ಪಾಠವನ್ನು ಕಲಿಯಬೇಕಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆಗೆ ಪರಿಶ್ರಮವನ್ನು ಪಟ್ಟಿದ್ದು, ಎಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ. 
ದೇಶದ 4 ಲೋಕಸಭೆ ಕ್ಷೇತ್ರಗಳು ಹಾಗೂ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್'ಡಿಎಗೆ ಭಾರೀ ಹಿನ್ನಡೆಯುಂಟಾಗಿದೆ. ಬಿಜೆಪಿ ವಿರುದ್ಧ ಈ ಒಟ್ಟು 14 ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಸಂಘಟಿತ ಹೋರಾಟ ನಡೆಸಿದ್ದ ಪ್ರತಿಪಕ್ಷಗಳಿಗೆ ಯಶಸ್ಸು ಸಿಕ್ಕಿದೆ. ಇದರಿಂದಾಗಿ 2019ರ ಲೋಕಸಭೆ ಚುನಾವಣೆಗೂ ಮುನ್ನ ತಾಲೀಮಿನಂತಿದ್ದ ಈ ಚುನಾವಣೆ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸಿದರೆ ಪ್ರತಿಪಕ್ಷಗಳಿಗೆ ಜನ ಸಾಧ್ಯ ಎಂಬ ಸಂದೇಶವನ್ನು ರವಾನಿಸಿದೆ. 

ಈ 14 ಸ್ಥಾನಗಳ ಪೈಕಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಅರ ಮಿತ್ರ ಪಕ್ಷಗಳು ಕೇವಲ 3 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಉಳಿದ ಕ್ಷೇತ್ರಗಳು ಕಾಂಗ್ರೆಸ್ ಹಾಗೂ ಇತರೆ ಬಿಜೆಪಿ ವಿರೋಧಿ ಪಕ್ಷಗಳ ಪಾಲಾಗಿವೆ. 

ಚುನಾವಣೆ ನಡೆದ 4 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಈ ಹಿಂದೆ ಗೆದಿದ್ದವು. ಈ ಪೈಕಿ 2 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇನ್ನುಳಿದ 2 ಕ್ಷೇತ್ರಗಳನ್ನು ಕಳೆದುಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.