ಭಾರತದೊಂದಿಗೆ ವ್ಯಾಪಾರ ಬಲವರ್ದನೆಗೆ ವಿಯೆಟ್ನಾಂ ಒಲವು
ಮುಂದಿನ ವರ್ಷಗಳಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಣ ವ್ಯಾಪಾರ, ಆರ್ಥಿಕ ಒಪ್ಪಂದಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವಂತೆ ಭಾರತದಲ್ಲಿನ ವಿಯೆಟ್ನಾಂ ರಾಯಬಾರಿ ತೊನ್ ಸಿನ್ಹಾ ಥಾನ್ ಹೇಳಿದ್ದಾರೆ.

ನವದೆಹಲಿ: ಮುಂದಿನ ವರ್ಷಗಳಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಣ ವ್ಯಾಪಾರ, ಆರ್ಥಿಕ ಒಪ್ಪಂದಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವಂತೆ ಭಾರತದಲ್ಲಿನ ವಿಯೆಟ್ನಾಂ ರಾಯಬಾರಿ ತೊನ್ ಸಿನ್ಹಾ ಥಾನ್ ಹೇಳಿದ್ದಾರೆ.
ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾಕನಾಡಿದ ಥಾನ್ , ಭಾರತ ಮತ್ತು ವಿಯೆಟ್ನಾಂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಾಗಿದ್ದು, ವಿಶ್ವದಲ್ಲಿ ಉತ್ತಮ ಆರ್ಥಿಕ ಪ್ರಗತಿ ಹೊಂದಿರುವುದಾಗಿ ತಿಳಿಸಿದರು.
ಆರ್ಥಿಕ ಸಂಬಂಧವನ್ನು ಭಾರತದಂತಹ ರಾಷ್ಟ್ರಗಳೊಂದಿಗೆ ವಿಯೆಟ್ನಾಂ ವೃದ್ದಿಸಿಕೊಳ್ಳಬೇಕಾಗಿದೆ. ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ಹೂಡಿಕೆ ಮಾಡಲು ವಿಪುಲ ಅವಕಾಶಗಳಿರುವುದಾಗಿ ಹೇಳಿದರು.
ಇತರ ರಾಷ್ಟ್ರಗಳೊಂದಿಗೆ 420 ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ನಡೆಯುತ್ತಿದ್ದು, ಭಾರತದೊಂದಿಗೆ ಪ್ರಸ್ತುತ 7.6 ಬಿಲಿಯನ್ ಡಾಲರ್ ನಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಅಭಿವೃದ್ದಿ ದರ ಶೇ, 7.3 ರಿಂದ 7.5 ರಷ್ಟು ಹೆಚ್ಚಾಗಲಿದೆ ಎಂದು ಥಾನ್ ತಿಳಿಸಿದರು.
ರಾಜಕೀಯ , ರಕ್ಷಣಾ ಸಹಕಾರ ಹೊರತುಪಡಿಸಿದಂತೆ ಶಿಕ್ಷಣ, ವಿಜ್ಞಾನ. ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿಯೂ ಉಭಯ ದೇಶಗಳ ನಡುವಣ ಸಂಬಂಧ ಅಭಿವೃದ್ದಿಗೆ ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಯೆಟ್ನಾಂ ಪ್ರವಾಸ ಕೈಗೊಳ್ಳಲಿದ್ದು, ಅವರ ಭೇಟಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಥಾನ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


