ದೇಶ

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮನೆಗೇ ನುಗ್ಗಿ ಯೋಧನ ಭೀಕರ ಹತ್ಯೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಪೊಲೀಸ್ ಪೇದೆಯ ಅಪಹರಣ ಮತ್ತು ಕೊಲೆ ಪ್ರಕರಣ ನಡೆದ 48 ಗಂಟೆಗಳಲ್ಲೇ ಮತ್ತೋರ್ವ ಭದ್ರತಾ ಸಿಬ್ಬಂದಿಯನ್ನು ಆತನ ಮನೆಗೇ ನುಗ್ಗಿ ಭೀಕರವಾಗಿ ಹತ್ಯೆ ಗೈದಿದ್ದಾರೆ.

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮನೆಗೇ ನುಗ್ಗಿ ಯೋಧನ ಭೀಕರ ಹತ್ಯೆ!
ಹುತಾತ್ಮ ಯೋಧ ನಾಸಿರ್ ಅಹ್ಮದ್
Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಪೊಲೀಸ್ ಪೇದೆಯ ಅಪಹರಣ ಮತ್ತು ಕೊಲೆ ಪ್ರಕರಣ ನಡೆದ 48 ಗಂಟೆಗಳಲ್ಲೇ ಮತ್ತೋರ್ವ ಭದ್ರತಾ ಸಿಬ್ಬಂದಿಯನ್ನು ಆತನ ಮನೆಗೇ ನುಗ್ಗಿ ಭೀಕರವಾಗಿ ಹತ್ಯೆ ಗೈದಿದ್ದಾರೆ.
ಜಮ್ನು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಆರ್ ಪಿಎಫ್ ಗೆ ಸೇರಿದ ಸೈನಿಕನನ್ನು ಉಗ್ರರು ಭೀಕರವಾಗಿ ಕೊಂದು ಹಾಕಿದ್ದಾರೆ. ಸೇನಾಮೂಲಗಳ ಪ್ರಕಾರ ಹುತಾತ್ಮ ಯೋಧನನ್ನು ಸಿಆರ್ ಪಿಎಫ್ ನ ಪೇದೆ ನಾಸೀರ್ ಅಹ್ಮದ್ ರ್ಯಾದರ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ನಾಸಿರ್ ಅಹ್ಮದ್ ರಜೆ ಮೇಲೆ ಪುಲ್ವಾಮ ಜಿಲ್ಲೆಯ ನೈರಾ ಪ್ರದೇಶದಲ್ಲಿರುವ ಮನೆಗೆ ತೆರಳಿದ್ದ. 
ಆದರೆ ನಿನ್ನೆ ಅವರು ಮನೆಯಲ್ಲಿರುವಾಗಲೇ ಮನೆಗೆ ನುಗ್ಗಿದ ಗುರುತು ತಿಳಿಯದ ಉಗ್ರರು ಗುಂಡು ಹಾರಿಸಿಕೊಂದು ಪರಾರಿಯಾಗಿದ್ದಾರೆ. ಇನ್ನು ಉಗ್ರರು ಸೈನಿಕನ ಮನೆಗೆ ನುಗ್ಗಿದ ವೇಳೆ ಸೈನಿಕನ ಮನೆಯ ಅಕ್ಕಪಕ್ಕದ ಮನೆಗಳಲ್ಲಿ ಜನರಿದ್ದರೂ ಅವರು ಅಸಹಾಯಕರಾಗಿದ್ದರು. ಸೈನಿಕನ ರಕ್ಷಣೆಗೆ ಧಾವಿಸಲಿಲ್ಲ.  ಕೂಡಲೇ ಸೈನಿಕನ ಸಂಬಂಧಿಕರು ಯೋಧ ನಾಸಿರ್ ಅಹ್ಮದ್ ರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರಾದರೂ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ಜಾರೆ.
ಪ್ರಸ್ತತ ಪ್ರಕರಣ ದಾಖಲಿಸಿಕೊಂಡಿರುವ ಪುಲ್ವಾಮ ಪೊಲೀಸರು ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಉಗ್ರ ಸಂಘಟನೆ ಸೇರಿರುವ ಸ್ಥಳೀಯ ಯುವಕರೇ ಈ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.