ದೇಶ

ಪುತ್ರ ಶೋಕಂ ನಿರಂತರಂ: ಮಗನನ್ನು ಬಲಿ ತೆಗೆದುಕೊಂಡ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಂದೆ!

ದೇಶದ ಕೆಲ ಮಹಾನಗರಗಳ ರಸ್ತೆಗಳು ಗುಂಡಿಮಯವಾಗಿದ್ದು ಅಪಘಾತದಲ್ಲಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ...

ಪುತ್ರ ಶೋಕಂ ನಿರಂತರಂ: ಮಗನನ್ನು ಬಲಿ ತೆಗೆದುಕೊಂಡ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ತಂದೆ!
ರಸ್ತೆ ಗುಂಡಿಗಳು
Published On :
ಮುಂಬೈ: ದೇಶದ ಕೆಲ ಮಹಾನಗರಗಳ ರಸ್ತೆಗಳು ಗುಂಡಿಮಯವಾಗಿದ್ದು ಅಪಘಾತದಲ್ಲಿ ಹಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. 
ಇಂತಹದ್ದೆ ರಸ್ತೆಗುಂಡಿಯಾಗಿ ಅಪಘಾತಕ್ಕೊಳಗಾಗಿ ಮಗನನ್ನು ಕಳೆದುಕೊಂಡಿದ್ದ ತಂದೆಯೊಬ್ಬರು ಮುಂಬೈ ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚುತ್ತಾ ಬಂದಿದ್ದಾರೆ. 
ಕಳೆದ ಮೂರು ವರ್ಷಗಳ ಹಿಂದೆ ಮುಂಬೈ ಜೋಗೇಶ್ವರಿ ವಿಖ್ರೋಲಿ ಲಿಂಕ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಾದಾರಾವ್ ಬಿಲ್ಹೋರೆ ತಮ್ಮ 16 ವರ್ಷದ ಮಗ ಪ್ರಕಾಶನನ್ನು ಕಳೆದುಕೊಂಡಿದ್ದರು. ನಿನ್ನೆಗೆ(ಜುಲೈ 28) ಆತ ಸತ್ತು ಮೂರು ವರ್ಷವಾಗಿದ್ದು ಅಪಘಾತ ನಡೆದ ಸ್ಥಳದಲ್ಲಿ ಇಂದು ರಸ್ತೆ ಗುಂಡಿ ಮುಚ್ಚುವ ಮೂಲಕ ಅವರು ಮಗನಿಗೆ ಗೌರವ ಸಲ್ಲಿಸಿದರು. 
ದಾದಾರಾವ್ ಅವರು ಮಗನನ್ನು ಕಳೆದುಕೊಂಡಾಗಿನಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದು ಇದೀಗ 556 ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ನನ್ನ ಸ್ಥಿತಿ ಮತ್ಯಾರಿಗೂ ಬರಬಾರದು, ಹೀಗಾಗಿ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.