ದೇಶ

ಆಧಾರ್ ನಿಂದ ಟ್ರಾಯ್ ಮುಖ್ಯಸ್ಥರ ಮಾಹಿತಿ ಸೋರಿಕೆಯಾಗಿಲ್ಲ: ಯುಐಡಿಎಐ

ಆಧಾರ್ ಸಂಖ್ಯೆಯನ್ನು ಬಳಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ....

ಆಧಾರ್ ನಿಂದ ಟ್ರಾಯ್ ಮುಖ್ಯಸ್ಥರ ಮಾಹಿತಿ ಸೋರಿಕೆಯಾಗಿಲ್ಲ: ಯುಐಡಿಎಐ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಆಧಾರ್ ಸಂಖ್ಯೆಯನ್ನು ಬಳಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ವಿಚಾರವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಭಾನುವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಆಧಾರ್ ಡೇಟಾಬೇಸ್ ಅಥವಾ ಯುಐಡಿಎಐ ಸರ್ವರ್ ನಿಂದ ಆರ್‌. ಎಸ್‌. ಶರ್ಮಾ ಅವರ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆಯಾಗಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಟ್ರಾಯ್ ಮುಖ್ಯಸ್ಥರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು, ಅವರ ವೈಯಕ್ತಿಕ ಮಾಹಿತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಹ್ಯಾಕರ್ ಎಂದು ಹೇಳಿಕೊಳ್ಳುವ ವ್ಯಕ್ತಿ ಅದನ್ನೆ ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಮೋಸಗಾರರು ಸಕ್ರಿಯೆವಾಗಿದ್ದು ಅದನ್ನು ನಂಬಬೇಡಿ ಎಂದು ಯುಐಡಿಎಐ ಮನವಿ ಮಾಡಿದೆ.
ಹ್ಯಾಕರ್ ಟ್ವಿಟರ್ ನಲ್ಲಿ ಪ್ರಕಟಿಸಿರುವ ಮಾಹಿತಿ ಆಧಾರ್ ಡೇಟಾಬೇಸ್ ಅಥವಾ ಯುಐಡಿಎಐ ಸರ್ವರ್ ನಿಂದ ಪಡೆದದ್ದು ಅಲ್ಲ. ಹ್ಯಾಕರ್ ನೀಡಿರುವ ಟ್ರಾಯ್ ಮುಖ್ಯಸ್ಥರ ಮಾಹಿತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ ಎಂದು ಯುಐಡಿಎಐ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ವೆಬ್ ಸೈಟ್ ನಲ್ಲಿ ಶರ್ಮಾ ಅವರ ಮೊಬೈಲ್ ನಂಬರ್ ಇದೆ. ಅವರು ಈ ಹಿಂದೆ ಎನ್ಐಸಿ ಕಾರ್ಯದರ್ಶಿಯಾಗಿದ್ದರು. ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಶರ್ಮಾ ಅವರ ಜನ್ಮದಿನದ ವಿವರ ಲಭ್ಯವಿದೆ. ಇನ್ನು ಟ್ರಾಯ್ ವೆಬ್ ಸೈಟ್ ನಲ್ಲಿ ಅವರ ವಿಳಾಸ ಇದೆ ಎಂದು ಯುಐಡಿಎಐ ತಿಳಿಸಿದೆ.
ಫ್ರಾನ್ಸ್ ಮೂಲದ ಹ್ಯಾಕರ್‌ ಎಲಿಯಟ್ ಅಲ್ಡರ್ ಸನ್‌ ಟ್ವಿಟರ್ ನಲ್ಲಿ ಆಧಾರ್ ಸಂಖ್ಯೆ ಪ್ರಕಟಿಸಿ ಸವಾಲು ಹಾಕಿದ್ದ ಟ್ರಾಯ್ ಅಧ್ಯಕ್ಷ ಶರ್ಮಾ ಅವರ ಮೊಬೈಲ್ ನಂಬರ್, ಪಾನ್ ಸಂಖ್ಯೆ ಸೇರಿ ಹಲವು ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಟ್ವೀಟಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸವಾಲ್ ಹಾಕಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.