ಸೆಕ್ಷನ್ 377 ರದ್ದಾಗಿಲ್ಲ, ರಾಹುಲ್ ವಿವಾಹವಾದ ನಂತರ ಅವರನ್ನು ಆಲಿಂಗಿಸಿಕೊಳ್ಳುತ್ತೇನೆ: ಬಿಜೆಪಿ ಸಂಸದ
ಆಲಿಂಗನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, "ನಾನು ಎದುರಾದರೆ ಬಿಜೆಪಿ ಸಂಸದರು ಎರಡು ಹೆಜ್ಜೆ ಹಿಂದಿಡುತ್ತಾರೆ" ಎಂಬ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ಸಂಸದರೊಬ್ಬರು ಪ್ರತಿಕ್ರಿಯೆ ನೀಡಿದ್ದು

Published On :
ಆಲಿಂಗನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, "ನಾನು ಎದುರಾದರೆ ಬಿಜೆಪಿ ಸಂಸದರು ಎರಡು ಹೆಜ್ಜೆ ಹಿಂದಿಡುತ್ತಾರೆ" ಎಂಬ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ಸಂಸದರೊಬ್ಬರು ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಆಲಿಂಗನದ ಬಗ್ಗೆ ನಮಗೆ ನಿಜವಾಗಿಯೂ ಹೆದರಿಕೆ ಇದೆ ಎಂದು ಹೇಳಿದ್ದಾರೆ.
ವ್ಯಂಗ್ಯ ಧಾಟಿಯಲ್ಲಿ ರಾಹುಲ್ ಆಲಿಂಗನದ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸೆಕ್ಷನ್ 377 ನ್ನು ಇನ್ನೂ ತೆಗೆದುಹಾಕಿಲ್ಲ. ರಾಹುಲ್ ಗಾಂಧಿ ವಿವಾಹವಾದ ನಂತರ ಅವರನ್ನು ಆಲಿಂಗನ ಮಾಡಿಕೊಳ್ಳಬಹುದು ಎಂದಿದ್ದಾರೆ.
ರಾಹುಲ್ ಗಾಂಧಿಯನ್ನು ಆಲಿಂಗನ ಮಾಡಿಕೊಂಡ ನಂತರ ನಮ್ಮ ಪತ್ನಿಯರು ನಮಗೆ ವಿಚ್ಛೇದನ ನೀಡುತ್ತಾರೆಂಬ ಭಯವಿದೆ. ಆದ್ದರಿಂದ ರಾಹುಲ್ ಗಾಂಧಿ ವಿವಾಹವಾದ ನಂತರ ಅವರನ್ನು ಆಲಿಂಗಿಸಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ನಾನು ಎದುರಾದರೆ ಬಿಜೆಪಿ ಸಂಸದರು ಎರಡು ಹೆಜ್ಜೆ ಹಿಂದಿಡುತ್ತಾರೆ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


