ದೇಶ

ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

ಈ ವರ್ಷ ಏಷ್ಯಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್‌ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ...

ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ
ಸೋನಮ್ ವಾಂಗ್ ಚುಕ್
Published On :
ನವದೆಹಲಿ: ಈ ವರ್ಷ ಏಷ್ಯಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್‌ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ.
ಭಾರತದ ಭರತ್ ವಟ್ವಾನಿ ಮತ್ತು ಸೋನಮ್ ವಾಂಗ್ ಚುಕ್ ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ  2018ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ.
ಲಡಾಕ್ ಮೂಲದ ಎಂಜಿನಿಯರ್ ಆಗಿರುವ 51 ವರ್ಷದ ಸೋನಮ್ ವಾಂಗ್ ಚುಕ್ ಅವರು, ಪಶ್ಚಿಮ ಹಿಮಾಲಯದ ಮರುಭೂಮಿಯಲ್ಲಿ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಲು ಐಸ್ ಸ್ತೂಪ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇನ್ನು ಭರತ್ ವಟ್ವಾನಿ ಅವರಿಗೆ ಅವರ ಅಸಾಧರಣ ಧೈರ್ಯ ಮತ್ತು ಬಹಿಷ್ಕರಿಸಿದ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಘನತೆಯನ್ನು ಪುನಃಸ್ಥಾಪಿಸುವ ಕಾರ್ಯವನ್ನು ಗುರುತಿಸಿ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ.
1957ರಲ್ಲಿ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್ ನ ಮೂರನೇ ಅಧ್ಯಕ್ಷರ ಹೆಸರಲ್ಲಿ ಸ್ಥಾಪಿಸಲಾಗಿದ್ದು, ಇದು ಏಷ್ಯಾದ ಪ್ರತಿಷ್ಠಿತ ಪ್ರಶಸ್ತಿ ಎಂದು ಕರೆಯಲ್ಪಡುತ್ತದೆ. ಏಷ್ಯಾ ವಲಯದಲ್ಲಿನ ಸಾಧಕರಿಗೆ ಮ್ಯಾಗ್ಸೆಸೆ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.