ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಸೈಕಲ್ ಯಾತ್ರೆ ವೇಳೆ ಆಯಾತಪ್ಪಿ ಬಿದ್ದ ತೇಜ್ ಪ್ರತಾಪ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರದ ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ರೂಪದಲ್ಲಿ ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದವರೆಗೆ...

Published On :
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರದ ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ರೂಪದಲ್ಲಿ ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದವರೆಗೆ ಸೈಕಲ್ ಯಾತ್ರೆ ಹೊರಟಿದ್ದ ಆರ್ಜೆಡಿ ಯುವ ನಾಯಕ ತೇಜ್ ಪ್ರತಾಪ್ ಯಾದವ್ ಆಯತಪ್ಪಿ ಬಿದ್ದ ಘಟನೆ ನಡೆದಿದೆ.
ತೇಜ್ ಪ್ರತಾಪ್ ವೇಗವಾಗಿ ಸೈಕಲ್ ಚಲಾಯಿಸಿದ್ದು ಸರ್ಕಲ್ ವೊಂದರಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ.
ತೇಜ್ ಪ್ರತಾಪ್ ಬಿದ್ದ ಕೂಡಲೇ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬ್ಬಂದಿಗಳು ನೆರವಿಗೆ ಧಾವಿಸಿದರೂ ಕೂಡಲೇ ಎದ್ದ ತೇಜ್ ಯಾತ್ರೆ ಮುಂದುವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿpatnabjpಬಿಜೆಪಿಪಾಟ್ನಾRJDTej Pratap Yadavತೇಜ್ ಪ್ರತಾಪ್ ಯಾದವ್ಆರ್ಜೆಡಿಸೈಕಲ್ ಯಾತ್ರೆCycle Yatra
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


