ದೇಶ

ಶಾಂತಿ ಕದಡಲು ಯತ್ನಿಸಿದವರಿಗೆ 'ಆಪರೇಷನ್ ವಿಜಯ್' ಮೂಲಕ ಯೋಧರು ದಿಟ್ಟ ಉತ್ತರ ನೀಡಿದ್ದರು: ಪ್ರಧಾನಿ ಮೋದಿ

19ನೇ ಕಾರ್ಗಿಲ್ ವಿಜಯದ ದಿನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ...

ಶಾಂತಿ ಕದಡಲು ಯತ್ನಿಸಿದವರಿಗೆ 'ಆಪರೇಷನ್ ವಿಜಯ್' ಮೂಲಕ ಯೋಧರು ದಿಟ್ಟ ಉತ್ತರ ನೀಡಿದ್ದರು: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :
ನವದೆಹಲಿ: 19ನೇ ಕಾರ್ಗಿಲ್ ವಿಜಯದ ದಿನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ. 
ಕಾರ್ಗಿಲ್ ವಿಜಯ ದಿವಸ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಶಾಂತಿಯನ್ನು ಕದಡಲು ಯತ್ನ ನಡೆಸಿದವರಿಗೆ 'ಆಪರೇಷನ್ ವಿಜಯ್' ಮೂಲಕ ನಮ್ಮ ವೀರಕ ಯೋಧರು ದಿಟ್ಟ ಉತ್ತರವನ್ನು ನೀಡಿದ್ದರು ಎಂದು ಹೇಳಿದ್ದಾರೆ. 
ಭಾರತ ರಾಷ್ಟ್ರದ ಸುರಕ್ಷತೆಯನ್ನು ನಮ್ಮ ಯೋಧರು ಸಾಬೀತು ಮಾಡಿದ್ದರು. ಆಪರೇಷನ್ ವಿಜಯದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ, ಹೋರಾಡಿದ ವೀರ ಯೋಧರಿಗೆ ನಮನಗಳು ಎಂದು ತಿಳಿಸಿದ್ದಾರೆ. 
1999, ಮೇ. 9 ರಂದು ಪಾಕಿಸ್ತಾನ, ಭಾರತದ ಗಡಿ ಭಾಗದಲ್ಲಿ ನುಸುಳಿ ಶೆಲ್ ದಾಳಿ ಮಾಡಲು ಪ್ರಾರಂಭಿಸಿತ್ತು. ಭಾರತ ಸೇನೆಯೂ ಸನ್ನದ್ಧವಾಗಿ ಯೋಧರನ್ನು ಕಾರ್ಗಿಲ್ ಸೆಕ್ಟರ್'ಗೆ ಕಳುಹಿಸಿತ್ತು. ಭಾರತ ಆಗ ಪ್ರಮುಖವಾಗಿ ನಡೆಸಿದ್ದು, ವಾಯುಪಡೆಯ ದಾಳಿಯನ್ನು. ಈ ವೇಳೆ ಭಾರತದ ವಾಯುಸೇನೆಯ 2 ಫೈಟರ್ ಹಾಗೂ ಒಂದು ಹೆಲಿಕಾಪ್ಟರ್ ಕೂಡ ಪಾಕಿಸ್ತಾನ ಸೇನೆ ಉಡಾಯಿಸಿತ್ತು. 
ಆದಾಗಿಯೂ ಭಾರತ ಸೇನೆ 32000 ಅಡಿ ಎತ್ತರದ ಪ್ರದೇಶದಲ್ಲಿ ಭಾರತ ಮೊದಲ ಬಾರಿ ವಾಯುದಾಳಿ ನಡೆಸಿತ್ತು. ಕಾರ್ಗಿಲ್ ದ್ರಾಸ್ ಸೆಕ್ಟರ್ ನಲ್ಲಿರುವ ಟೈಗರ್ಹ ಹಿಲ್ ಪಾಕಿಸ್ತಾನದ ವಶದಲ್ಲಿರುವ ಅತ್ಯಂತ ಎತ್ತರದ ಪ್ರದೇಶ. ಅಲ್ಲಿ ನಡೆದ 11 ಗಂಟೆ ಯುದ್ಧ ಸೆರೆಯಾಗಿದೆ. ಅಂತಿಮವಾಗಿ ಜು.26ರಂದು ಕಾರ್ಯಾಚರಣೆ ಮುಗಿದು ವಿಜಯ ದಿವಸವನ್ನು ಭಾರತ ಘೋಷಿಸಿತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.