ದೇಶ

ಮಕ್ಕಳು ದೇವರ 'ಪ್ರಸಾದ' ಇದ್ದಂತೆ, ಪ್ರತಿಯೊಬ್ಬ ಹಿಂದುವಿಗೂ ಐದು ಮಕ್ಕಳಿರಬೇಕು: ಬಿಜೆಪಿ ಶಾಸಕ

ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ...

ಮಕ್ಕಳು ದೇವರ 'ಪ್ರಸಾದ' ಇದ್ದಂತೆ, ಪ್ರತಿಯೊಬ್ಬ ಹಿಂದುವಿಗೂ ಐದು ಮಕ್ಕಳಿರಬೇಕು: ಬಿಜೆಪಿ ಶಾಸಕ
ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್
Published On :
ಉತ್ತರಪ್ರದೇಶ: ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. 
ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಕ್ಕಳು ದೇವರ ಪ್ರಸಾದವಿದ್ದಂತೆ. ಪ್ರತೀ ಹಿಂದೂಗಳೂ 5 ಮಕ್ಕಳನ್ನು ಹೊಂದಿರಬೇಕು. ಎರಡು ಮಗು ಪುರುಷನಿಗಾಗಿ, ಎರಡು ಮಕ್ಕಳು ಮಹಿಳೆಯರಿಗಾಗಿ, ಮತ್ತೊಂದು ಮಗು ಹೆಚ್ಚುವರಿಯಾಗಿ ಹೆರಬೇಕೆಂದು ಹೇಳಿದ್ದಾರೆ. 
ಜನಸಂಖ್ಯೆ ನಿಯಂತ್ರಣ, ಸಮತೋಲನವಿಲ್ಲದೇ ಹೋದರೆ, ಹಿಂದೂಗಳು ಅಲ್ಪಸಂಖ್ಯಾರಾಗಿ ಹೋಗುತ್ತಾರೆ. ಮಕ್ಕಳಿಗೆ ಜನ್ಮ ನೀಡುವುದು ದೇವರು ಕೊಟ್ಟ ಪ್ರಸಾದವಿದ್ದಂತೆ. ಹಿಂದೂಗಳು ಬಲಗೊಂಡರೆ, ಭಾರತ ಬಲಗೊಳ್ಳುತ್ತದೆ. ಹಿಂದೂಗಳೇ ದುರ್ಬಲರಾದರೆ, ಭಾರತ ದುರ್ಬಲವಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.