2015ರ ಗಲಭೆ ಪ್ರಕರಣ: ಹಾರ್ದಿಕ್ ಪಟೇಲ್ ಅಪರಾಧಿ ಎಂದು ಕೋರ್ಟ್ ತೀರ್ಪು, 2 ವರ್ಷ ಜೈಲು ಶಿಕ್ಷೆ
ಪಾಟೀದಾರರ ಮೀಸಲಾತಿ ಹೋರಾಟದ ಹೆಸರಲ್ಲಿ 2015ರಲ್ಲಿ ಸಂಭವಿಸಿದ್ದ ಗಲಭೆ ಪ್ರಕರಣದಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಅಪರಾದಿ ಎಂದು ಕೋರ್ಟ್ ತೀರ್ಪು ನೀಡಿದೆ.

Published On :
ಮೆಹ್ಸಾನಾ: ಪಾಟೀದಾರರ ಮೀಸಲಾತಿ ಹೋರಾಟದ ಹೆಸರಲ್ಲಿ 2015ರಲ್ಲಿ ಸಂಭವಿಸಿದ್ದ ಗಲಭೆ ಪ್ರಕರಣದಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಅಪರಾದಿ ಎಂದು ಕೋರ್ಟ್ ತೀರ್ಪು ನೀಡಿದೆ.
2015ರಲ್ಲಿ ಪಾಟೀದಾರ್ ಆಂದೋಲನದ ವೇಳೆ ಬಿಜೆಪಿ ಶಾಸಕ ರಿಶಿಕೇಶ್ ಪಟೇಲರ ವಿಸಾನಗರ ಕಚೇರಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಗುಜರಾತ್ ನ ವಿಸಾನಗರ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿತ್ತು. ಇದೀಗ ಈ ವಿಚಾರಣೆ ಪೂರ್ಣಗೊಂಡಿದ್ದು, ಇಂದು ಕೋರ್ಟ್ ತನ್ನ ತೀರ್ಪು ನೀಡಿದೆ. ಹಾರ್ದಿಕ್ ಪಟೇಲ್ ಮತ್ತು ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ರನ್ನು ಕೋರ್ಟ್ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.
ಅಲ್ಲದೆ ಎಲ್ಲ ಅಪರಾಧಿಗಳಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಶಿಕ್ಷೆ ಅಲ್ಲದೇ 50,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಹಾರ್ದಿಕ್ ಮಾತ್ರವಲ್ಲದೇ ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ಸಹ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರಿಗೂ ಎರಡು ವರ್ಷಗಳ ಶಿಕ್ಷೆ ಹಾಗು 50,000ರು ದಂಡ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hardik Patelಹಾರ್ದಿಕ್ ಪಟೇಲ್Patidar agitationMehsana Court2015 Gujarat Riot caseಮೆಹ್ಸಾನಾ ಕೋರ್ಟ್ಪಾಟಿದಾರ್ ಆಂದೋಲನ2015 ಗುಜರಾತ್ ಗಲಭೆ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


