ಗುಂಪು ಹಲ್ಲೆ ಭೀತಿ: ಉಡುಗೊರೆಯಾಗಿ ಬಂದಿದ್ದ ಗೋವನ್ನು ವಾಪಸ್ ಮಾಡಿದ ಆಜಂ ಖಾನ್ ಪತ್ನಿ
ಗುಂಪು ಹಲ್ಲೆ ಭೀತಿಯಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ತಜೀಮ್ ಫಾತಿಮಾ ...

Published On :
ರಾಂಪುರ್: ಗುಂಪು ಹಲ್ಲೆ ಭೀತಿಯಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ತಜೀಮ್ ಫಾತಿಮಾ ಅವರು ತಮಗೆ ಸ್ವಾಮೀಜಿಯೊಬ್ಬರು ಉಡುಗೊರೆಯಾಗಿ ನೀಡಿದ್ದ ಗೋವನ್ನು ವಾಪಸ್ ಮಾಡಿದ್ದಾರೆ.
ಗುಂಪು ಹಲ್ಲೆ ಭೀತಿಯಿಂದ ಉಡುಗೊರೆಯಾಗಿ ನೀಡಿದ್ದ ಗೋವನ್ನು ವಾಪಸ್ ನೀಡಿದ್ದೇವೆ. ಇದು ಅತ್ಯಂತ ನೋವಿನ ವಿಷಯ. ಯಾರಾದರೂ ಆ ಸುಂದರ ಗೋವನ್ನು ಕೊಂದು ಆರೋಪವನ್ನು ನಮ್ಮ ಮೇಲೆ ಹೊರಿಸಬಹುದು ಎಂಬ ಭೀತಿಯಿಂದ ಅದನ್ನು ವಾಪಸ್ ನೀಡಿದ್ದೇವೆ ಎಂದು ಫಾತಿಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ಫಾತಿಮಾ ಆರೋಪಿಸಿದ್ದಾರೆ.
ಗೋವರ್ಧನ ಪೀಠದ ಶಂಕರಾಚಾರ್ಯ ಅಧೋಕ್ಷಜಾನಂದ ಮಹಾರಾಜ್ ಅವರು ಆಜಂ ಖಾನ್ ಕುಟುಂಬಕ್ಕೆ ಗೋವನ್ನು ಉಡುಗೊರೆಯಾಗಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


