ದೇಶ

ಹಳೆಯ ಸ್ಖಾನಕ್ಕೆ ಮರಳಿದ ಇರಾನ್, ಭಾರತ ದೇಶದ 2ನೇ ಅತೀ ದೊಡ್ಡ ತೈಲ ಪೂರೈಕೆದಾರ

ಭಾರತ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾನ್ ದೇಶ 2ನೇ ದೇಶವಾಗಿ ಹೊರಹೊಮ್ಮಿದೆ.

ಹಳೆಯ ಸ್ಖಾನಕ್ಕೆ ಮರಳಿದ ಇರಾನ್, ಭಾರತ ದೇಶದ 2ನೇ ಅತೀ ದೊಡ್ಡ ತೈಲ ಪೂರೈಕೆದಾರ
ಸಂಗ್ರಹ ಚಿತ್ರ
Published On :
ನವದೆಹಲಿ: ಭಾರತ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾನ್ ದೇಶ 2ನೇ ದೇಶವಾಗಿ ಹೊರಹೊಮ್ಮಿದೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾಡಿಕೊಳ್ಳಲಾದ ಪೆಟ್ರೋಲಿಯಂ ಆಮದಿನ ಕುರಿತ ಅಂಕಿಅಂಶಗಳ ಪ್ರಕಾರ, ಸೌದಿಅರೇಬಿಯಾಗಿಂತಲೂ ಇರಾನ್‌ನಿಂದ ಭಾರತ ಹೆಚ್ಚಿನ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಆ ಮೂಲಕ ಸೌದಿ ಅರೇಬಿಯಾವನ್ನು ಹಿಂದಿಕ್ಕಿದ ಇರಾನ್‌, ಭಾರತದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ. 
2010-11ರ ವರೆಗೂ ಇರಾನ್‌ ಭಾರತದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿತ್ತು. ಆದರೆ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಮೇಲೆ ಅಮೆರಿಕ ನಿರ್ಬಂಧ ಹೇರಿದ ಕಾರಣ ನಂತರದ ದಿನಗಳಲ್ಲಿ ಏಳನೇ ಸ್ಥಾನಕ್ಕೆ ಇರಾನ್‌ ಕುಸಿದಿತ್ತು. ಇದೀಗ ಏಳು ವರ್ಷಗಳ ಬಳಿಕ ದೇಶದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರನಾಗಿ ಇರಾನ್‌ ಮೂಡಿದೆ.  2015ರಲ್ಲಿ ಇರಾನ್‌ ಮೇಲಿನ ಅಮೆರಿಕನ್‌ ನಿರ್ಬಂಧ ತೆರವುಗೊಳಿಸಿದ ಬಳಿಕ ತೈಲದ ಆಮದನ್ನು ಕ್ರಮೇಣ ಹೆಚ್ಚಿಸಲಾಗಿತ್ತು.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್‌ ಸಂಸತ್ತಿಗೆ ವರದಿ ನೀಡಿದ್ದು, 2018ರ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಮಾಡಿಕೊಳ್ಳಲಾದ ತೈಲ ಆಮದಿನ ಅಂಕಿಅಂಶಗಳ ಪ್ರಕಾರ, ಇರಾಕ್‌ ನಿಂದ 7.2 ದಶಲಕ್ಷ ಮೆಟ್ರಿಕ್ ಟನ್‌, ಇರಾನ್‌ನಿಂದ 5.6 ದಶಲಕ್ಷ ಮೆಟ್ರಿಕ್‌ ಟನ್‌ ಹಾಗು ಸೌದಿ ಅರೇಬಿಯಾದಿಂದ 5.2 ದಶಲಕ್ಷ ಮೆಟ್ರಿಕ್‌ ಟನ್‌ ನಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.