ದೇಶ

ತಬ್ಬಿಕೊಳ್ಳುವುದು ಪ್ರಧಾನಿ ಮೋದಿ ಅವರ ಟ್ರೇಡ್ ಮಾರ್ಕ್: ರಾಹುಲ್ ಮಾಡಿದ್ದು ಪ್ರಶಂಸನೀಯ: ಶತೃಘ್ನ ಸಿನ್ಹಾ

ರಾಹುಲ್ ಗಾಂಧಿ ಪ್ರಧಾನಿ ಅವರನ್ನು ತಬ್ಬಿಕೊಂಡಿದ್ದರಲ್ಲಿ ಅಳುವಂತದ್ದು ಹಾಗೂ ಚರ್ಚೆ ಮಾಡುವಂತದ್ದು ಏನಿದೆ...

ತಬ್ಬಿಕೊಳ್ಳುವುದು ಪ್ರಧಾನಿ ಮೋದಿ ಅವರ ಟ್ರೇಡ್ ಮಾರ್ಕ್: ರಾಹುಲ್ ಮಾಡಿದ್ದು ಪ್ರಶಂಸನೀಯ: ಶತೃಘ್ನ ಸಿನ್ಹಾ
ಮೋದಿ ಅವರನ್ನು ತಬ್ಬಿಕೊಂಡ ರಾಹುಲ್ ಗಾಂಥಿ ಮತ್ತು ಶತೃಘ್ನ ಸಿನ್ಹಾ
Published On :
ನವದೆಹಲಿ: ಸಂಸತ್ತಿನ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಪ್ರದಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಬ್ಬಿಕೊಂಡ ವಿಷಯ ದೇಶದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿನ್ಹಾ,ರಾಹುಲ್ ಗಾಂಧಿ ಪ್ರಧಾನಿ ಅವರನ್ನು ತಬ್ಬಿಕೊಂಡಿದ್ದರಲ್ಲಿ ಅಳುವಂತದ್ದು ಹಾಗೂ ಚರ್ಚೆ ಮಾಡುವಂತದ್ದು ಏನಿದೆ, ಅದೊಂದು ಆತ್ಮೀಯತೆಯ ಅಪ್ಪುಗೆ, ಡೈನಾಮಿಕ್ ಯಂಗ್ ಲೀಡರ್ ರಾಹುಲ್ ಗಾಂಧಿ, ಮೋದಿ ಅವರನ್ನು ತಬ್ಬಿಕೊಂಡಿದ್ದು ಪ್ರಶಂಸನೀಯ ಎಂದು ಟ್ವೀಟ್ ಮಾಡಿದ್ದಾರೆ.
ಪ್ರದಾನಿ ಮೋದಿ ವಿದೇಶಿ ಗಣ್ಯರನ್ನು ತಬ್ಬಿಕೊಂಡೇ ಸ್ವಾಗತಿಸುತ್ತಾರೆ. ತಬ್ಬಿಕೊಳ್ಳುವುದು ಮೋದಿ ಅವರ ಟ್ರೇಡ್ ಮಾರ್ಕ್ ಆಗಿದೆ.  ರಾಹುಲ್ ಗಾಂಧಿ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.