ಇದು ಮೋದಿಯವರ 'ಕ್ರೂರ ನವ ಭಾರತ', ಅಮಾಯಕರು ಸಾಯುತ್ತಿದ್ದಾರೆ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರ ಕ್ರೂರ ನವ ಭಾರತದಲ್ಲಿ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಹೇಳಿದ್ದಾರೆ

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕ್ರೂರ ನವ ಭಾರತದಲ್ಲಿ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಆಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಮತ್ತು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸಾಮೂಹಿಕ ಹಲ್ಲೆಗೀಡಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು 3 ಗಂಟೆ ತೆಗೆದುಕೊಂಡಿದ್ದಾಕೆ. ಕೇವಲ 6 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಸೇರಿಸಲು ಅಷ್ಟು ಹೊತ್ತು ಬೇಕೇ? ವಾಹನದಲ್ಲಿದ್ದ ವ್ಯಕ್ತಿ ನೋವಿನಿಂದ ನರಳುತ್ತಿದ್ದರೆ ಮಾರ್ಗಮಧ್ಯೆ ಪೊಲೀಸರು ಟೀ ವಿರಾಮ ತೆಗೆದುಕೊಂಡಿದ್ದಾರೆ. ಈ ಮೋದಿಯ ಕ್ರೂರ ನವ ಭಾರತದಲ್ಲಿ ಮಾನವೀಯತೆಯ ಜಾಗದಲ್ಲಿ ದ್ವೇಷ ಸ್ಥಾನ ಪಡೆದಿದೆ. ಅಮಾಯಕರು ಈ ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲ ಮಾಧ್ಯಮಗಳು ರಾಜಸ್ತಾನದ ಆಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಮತ್ತು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವರದಿಗಳನ್ನು ಬಿತ್ತರಿಸಿದ್ದವು. ವರದಿಯನ್ವಯ ಗೋಸಂರಕ್ಷಕರ ಸೋಗಿನಲ್ಲಿ ದಾಳಿ ಮಾಡಿದ್ದವಂರಿಂದ ಗಂಭೀರವಾಗಿ ಗಾಯಗೊಂಡಿದ್ದ ರಕ್ಬರ್ ಖಾನ್ ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬ ಮಾಡಿದ್ದರಿಂದಲೇ ಆತ ಸಾವನ್ನಪ್ಪಿದ್ದ ಎಂದು ಹೇಳಿದ್ದವು.
ಘಟನಾ ಪ್ರದೇಶದಿಂದ ಆಸ್ಪತ್ರೆಗೆ ಕೇವಲ 6 ಕಿ.ಮೀ ಅಂತರವಿದ್ದು. ವಾಹನದಲ್ಲಿ ತೆರಳಿದರೆ ಕೇವಲ 15 ನಿಮಿದಲ್ಲಿ ಆಸ್ಪತ್ರೆ ಸೇರಬಹುದು. ಆದರೆ ಪೊಲೀಸರು 3 ಗಂಟೆ ತೆಗೆದುಕೊಂಡರು. ಸಾವುನೋವಿನ ನಡುವೆ ಸಂತ್ರಸ್ಥ ನರಳುತ್ತಿದ್ದರೂ ಪೊಲೀಸರು ಮಾರ್ಗ ಮಧ್ಯೆ ಚಹಾ ಸೇವಿಸಲು ವಾಹನ ನಿಲುಗಡೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiPM Modiಪ್ರಧಾನಿ ಮೋದಿರಾಹುಲ್ ಗಾಂಧಿNDA governmentಎನ್ ಡಿಎ ಸರ್ಕಾರcow vigilantismAlwar lynchingಗೋ ಸಂರಕ್ಷಣೆಆಳ್ವಾರ್ ಸಾಮೂಹಿಕ ಹಲ್ಲೆRahul Gnadhi
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


