ವಿಶ್ವದ ಎದುರು ದೇಶದ ರಾಜಕಾರಣಿಗಳ ವರ್ಚಸ್ಸಿಗೆ ರಾಹುಲ್ ಗಾಂಧಿ ಧಕ್ಕೆ: ಅರುಣ್ ಜೇಟ್ಲಿ
ರಾಫೆಲ್ ನಡಲ್ ಓಪ್ಪಂದ ಸಂಬಂಧ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಸಂಭಾಷಣೆ ಪ್ರಸ್ತಾವಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವದ ಮುಂದೆ ದೇಶದ ರಾಜಕಾರಣಿಗಳ ವರ್ಚಸ್ಸಿಗೆ ತೀವ್ರ ರೀತಿಯ ಧಕ್ಕೆ ತಂದಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ನವದೆಹಲಿ: ರಾಫೆಲ್ ನಡಲ್ ಓಪ್ಪಂದ ಸಂಬಂಧ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಸಂಭಾಷಣೆ ಪ್ರಸ್ತಾವಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವದ ಮುಂದೆ ದೇಶದ ರಾಜಕಾರಣಿಗಳ ವರ್ಚಸ್ಸಿಗೆ ತೀವ್ರ ರೀತಿಯ ಧಕ್ಕೆ ತಂದಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಸರ್ಕಾರ ಮಾಹಿತಿ ನೀಡಲು ನಿರಾಕರಿಸುತ್ತಿದೆ ಎಂದು ಹೇಳಿದ್ದರು.
ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಅವರೊಂದಿಗಿನ ಒಪ್ಪಂದ ಕುರಿತು ರಾಹುಲ್ ಗಾಂಧಿ ಪ್ರಸ್ತಾಪಿಸಿ ಅವರ ವಿಶ್ವಾಸರ್ಹತೆಯನ್ನು ಕಡಿಮೆ ಮಾಡಲಾಗಿದೆ ಅಲ್ಲದೇ, ವಿಶ್ವದ ಮುಂದೆ ಭಾರತೀಯ ರಾಜಕಾರಣಿಗಳ ವರ್ಚಸ್ಸಿಗೆ ಧಕ್ಕೆ ತರಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಸತ್ಯಗಳು ಯಾವಾಗಲೂ ಪವಿತ್ರವಾಗಿರುತ್ತವೆ , ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯನ್ನು ಕ್ಷುಲಕಗೊಳಿಸಿದ್ದಾರೆ ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಪ್ರಧಾನಿಯಾಗಬೇಕೆಂದು ಬಯಸುವವರು ಭ್ರಮೆ, ಸುಳ್ಳುತನ ಮತ್ತು ಚಮತ್ಕಾರ ಗುಣವನ್ನು ಎಂದಿಗೂ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಚರ್ಚೆಯಲ್ಲಿ ಪ್ರಮುಖವಾಗಿ ಭಾಗವಹಿಸುವವರು ಸಾಮಾನ್ಯವಾಗಿ ಹಿರಿಯ ರಾಜಕೀಯ ನಾಯಕರಾಗಿದ್ದು, ರಾಜಕೀಯ ಪ್ರವಚನ ಮಟ್ಟವನ್ನು ಹೆಚ್ಚಿಸುವ ನಿರೀಕ್ಷೆ ಇರುತ್ತದೆ. ಚರ್ಚೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಪ್ರಧಾನ ಮಂತ್ರಿಯ ಆಕಾಂಕ್ಷೆಗಳನ್ನು ಹೊಂದಿದ್ದರೆ ಪ್ರತಿ ಪದವೂ ಅಮೂಲ್ಯವಾದುದು , ಅವರ ಸತ್ಯಗಳು ವಿಶ್ವಾಸಾರ್ಹತೆಯನ್ನು ತಿಳಿಸಬೇಕು . ರಾಹುಲ್ ಗಾಂಧಿ ಪದೇ ಪದೇ ಸತ್ಯವನ್ನು ಮರೆಮಾಚುತ್ತಿದ್ದರು. ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.
ಕೇಂದ್ರಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದ ಪರ 126 ಮತಗಳು ಬಿದ್ದರೆ ವಿರುದ್ಧವಾಗಿ 325 ಮತಗಳು ಚಲಾವಣೆಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


