ದೇಶ

ಇದು ಸಂಸತ್, ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ :ಹರ್‌ಸಿಮ್ರತ್‌ ಕೌರ್‌ ಬಾದಲ್

ಲೋಕಸಭೆಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವಾಗ ಎದ್ದು ನಿಂತ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್, ಇದು ಸಂಸತ್ , ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ ಎಂದು ಹೇಳುವ ಮೂಲಕ ಬಾಯಿ ಮುಚ್ಚಿಸಲು ಪ್ರಯತ್ನ ನಡೆಸಿದ ಘಟನೆಯೂ ನಡೆಯಿತು.

ಇದು ಸಂಸತ್, ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ :ಹರ್‌ಸಿಮ್ರತ್‌ ಕೌರ್‌ ಬಾದಲ್
ಹರ್‌ಸಿಮ್ರತ್‌ ಕೌರ್‌ ಬಾದಲ್,
Published On :

ನವದೆಹಲಿ: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿಂದು ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಫೆಲ್ ನಡಲ್ ವಿಮಾನ ಖರೀದಿ ಒಪ್ಪಂದ , ನಿರುದ್ಯೋಗ , ನೋಟ್ ಅಮಾನ್ಯತೆ,  ಮಹಿಳೆಯರ ಅಸುರಕ್ಷತೆ ಸೇರಿದಂತೆ  ಹಲವು ವಿಚಾರಗಳ ಕುರಿತಂತೆ  ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಮಧ್ಯೆ ಎದ್ದು ಕೇಂದ್ರ ಸಚಿವೆ ನಿಂತ ಹರ್‌ಸಿಮ್ರತ್‌ ಕೌರ್‌ ಬಾದಲ್,   ಇದು ಸಂಸತ್ , ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ ಎಂದು  ಜೋರು ಧ್ವನಿಯಲ್ಲಿ ರಾಹುಲ್ ಗಾಂಧಿ ಆರೋಪಗಳನ್ನು ಟೀಕಿಸಿದರು.

ಅಲ್ಲದೇ, ಈ ಹಿಂದೆ ರಾಹುಲ್ ಗಾಂಧಿ ಪಂಜಾಬ್ ರಾಜ್ಯದವರು ಯಾವಾಗಲೂ ಮಾದಕ ದ್ರವ್ಯದ ನಶೆಯಲ್ಲಿರುತ್ತಾರೆ  ಎಂದು ನೀಡಿದ ಹೇಳಿಕೆ  ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಹರ್‌ಸಿಮ್ರತ್‌ ಕೌರ್‌ ಬಾದಲ್,  ಇಂದು ಸದನಕ್ಕೆ ಏನು ತಿಂದು ಬಂದಿದ್ದೀರಿ ಎಂದು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ ಬಾಯಿ ಕಟ್ಟಿಹಾಕಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು.

ನಂತರ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಹರ್‌ಸಿಮ್ರತ್‌ ಕೌರ್‌ ಬಾದಲ್ ಅವರನ್ನು ಸಮಾಧಾನಪಡಿಸಿ ರಾಹುಲ್ ಗಾಂಧಿ ಮಾತು ಮುಂದುವರೆಸಲು ಅವಕಾಶ ಮಾಡಿಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.