ದೇಶ

ತಮಿಳಿನಲ್ಲಿ ನೀಟ್ ಬರೆದವರಿಗೆ ಕೃಪಾಂಕ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಭಾಷಾಂತರ ದೋಷವಿದ್ದ ಕಾರಣ ತಮಿಳು ಮಾದ್ಯಮದಲ್ಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ನೀಡಬೇಕೆಂಬಮದ್ರಾಸ್ ಹೈಕೋರ್ಟ್....

ತಮಿಳಿನಲ್ಲಿ ನೀಟ್ ಬರೆದವರಿಗೆ ಕೃಪಾಂಕ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಸುಪ್ರೀಂ ಕೋರ್ಟ್
Published On :
ನವದೆಹಲಿ: ಭಾಷಾಂತರ ದೋಷವಿದ್ದ ಕಾರಣ ತಮಿಳು ಮಾದ್ಯಮದಲ್ಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ನೀಡಬೇಕೆಂಬಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್. ಎ. ಬೊಬ್ಬೆ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು ಬಿಎಸ್ಇ ಮನವಿಯನ್ನು ಪುರಸ್ಕರಿಸಿದೆ.
ಎರಡು ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ ಎರಡೂ ಪಕ್ಷಗಳು ತಾವು ಉತ್ತಮ ಪರಿಹಾರದೊಡನೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದ್ಯು ಸೂಚಿಸಿದೆ. ಅಲ್ಲದೆ "ನಾವು ಕೃಪಾಂಕಗಳನ್ನು ನೀಡಲು ಸಾಧ್ಯವಿಲ್ಲ" ಎಂದಿದೆ.
ಮದ್ರಾಸ್ ಹೈಕೋರ್ಟ್ ನ ಮಧುರೈಪೀಠವು ತಮಿಳು ಮಾದ್ಯಮದಲ್ಲಿ ನೀಟ್ ಪರೀಕ್ಷೆ ಬರೆದವರಿಗೆ 196 ಕೃಪಾಂಕಗಳನ್ನು ನೀಡಬೇಕೆಂದು ಸಿಬಿಎಸ್ಇಗೆ ಸೂಚಿಸಿತ್ತು. ತೀರ್ಪು ಇದೇ ಜುಲೈ 10 ರಂದು ಪ್ರಕಟವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.