ದೇಶ

ಅವಿಶ್ವಾಸ ನಿರ್ಣಯ:ಕೇಂದ್ರದಿಂದ ಕಡೆಗಣಿಸಲ್ಪಟ್ಟ ನ್ಯಾಯ ಒದಗಿಸುವ ಭರವಸೆಯಲ್ಲಿ ಟಿಡಿಪಿ

ತೆಲುಗು ದೇಶಂ ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಮೇಲಿನ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೊಕೇಶ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವಿಶ್ವಾಸ ನಿರ್ಣಯ:ಕೇಂದ್ರದಿಂದ ಕಡೆಗಣಿಸಲ್ಪಟ್ಟ ನ್ಯಾಯ ಒದಗಿಸುವ ಭರವಸೆಯಲ್ಲಿ  ಟಿಡಿಪಿ
ನಾರಾ ಲೊಕೇಶ್
Published On :

ನವದೆಹಲಿ: ತೆಲುಗು ದೇಶಂ ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಮೇಲಿನ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ  ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೊಕೇಶ್  ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಂಧ್ರಪ್ರದೇಶದ ಹಕ್ಕಿನ ಬೇಡಿಕೆಗಾಗಿ ಕೇಂದ್ರಸರ್ಕಾರದ ವಿರುದ್ಧ ಹೋರಾಟಕ್ಕೆ  ರಾಜ್ಯದ ಎಲ್ಲಾ ಪ್ರಜೆಗಳು, ಪಕ್ಷದ ಕಾರ್ಯಕರ್ತರು  ಬೆಂಬಲಿಸುವಂತೆ ಅವರು ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರದಿಂದ ಕಡೆಗಣಿಸಲ್ಪಟ್ಟ ನ್ಯಾಯವನ್ನು ಟಿಡಿಪಿ ಕೊಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿನ ಬಿಜೆಪಿ ತಮ್ಮಗೆ ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸದಲ್ಲಿ ಬಿಜೆಪಿಗೆ 2014ರಲ್ಲಿ ಸೇರ್ಪಡೆಯಾದೇವು. ಆದರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಕೇಂದ್ರಸರ್ಕಾರ  ಅನ್ಯಾಯ ಮಾಡಿದೆ. ರಾಜ್ಯದ ಎಲ್ಲಾ ಪುರುಷರು, ಮಹಿಳೆಯರು ಕೇಂದ್ರದ ವಿರುದ್ಧದ ಹೋರಾಟಕ್ಕೆ ಬೆಂಬಲಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
 ಈ ಮಧ್ಯೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ , ಬಿಜೆಪಿ ಹಾಗೂ ಟಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶ ಜನತೆ ನೀಡಿದ್ದ ಅವಕಾಶವನ್ನು ಬಿಜೆಪಿ ಹಾಗೂ ಟಿಡಿಪಿ ವ್ಯರ್ಥಮಾಡಿಕೊಂಡಿವೆ.  ಇದು ಸಾರ್ವಜನಿಕರ ಮೌಲ್ಯಯುತ ಸಮಯ, ಹಣ ಮತ್ತು ಸಂಕಟಕ್ಕೆ ಕಾರಣವನ್ನುಂಟುಮಾಡುತ್ತದೆ ಎಂದು  ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.