ಅವಿಶ್ವಾಸ ನಿರ್ಣಯ; ಕಡಿಮೆ ಸಮಯಕ್ಕೆ ಆಕ್ಷೇಪ, ಸದನದಿಂದ ಹೊರನಡೆದ ಬಿಜೆಡಿ
ಕೇಂದ್ರದ ಪ್ರಧಾನಮಂತ್ರಿ ಮೋದಿ ನೇತೃತ್ವದ ಅವಿಶ್ವಾಯ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭಗೊಂಡಿದ್ದು, ವಿಶ್ವಾಸ ಮತಯಾಚನೆಗೆ ವಿರೋಧ ಪಕ್ಷಗಳಿಗೆ ಕಡಿಮೆ ಸಮಯ ನೀಡುವುದಕ್ಕೆ ಆಕ್ಷೇಪ...

Published On :
ನವದೆಹಲಿ; ಕೇಂದ್ರದ ಪ್ರಧಾನಮಂತ್ರಿ ಮೋದಿ ನೇತೃತ್ವದ ಅವಿಶ್ವಾಯ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭಗೊಂಡಿದ್ದು, ವಿಶ್ವಾಸ ಮತಯಾಚನೆಗೆ ವಿರೋಧ ಪಕ್ಷಗಳಿಗೆ ಕಡಿಮೆ ಸಮಯ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜು ಜನತಾ ದಳ (ಬಿಜೆಡಿ) ಪಕ್ಷ ಸದನದಿಂದ ಹೊರ ನಡೆದಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಡಿಮೆ ಸಮಯ ನೀಡುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಡಿ ಸಂಸದರೂ ಕೂಡ ಆಕ್ಷೇಪ ವ್ಯಕ್ತಪಡಿಸಿ, ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ಸದನದಿಂದ ಹೊರನಡೆದರು.
ಬಿಜೆಪಿ ಪಕ್ಷ 19 ಸದಸ್ಯರು ಸದನದಿಂದ ಹೊರ ನಡೆದ ಹಿನ್ನಲೆಯಲ್ಲಿ ಸದನದ ಒಟ್ಟು ಸಂಖ್ಯಾಬಲ 514ಕ್ಕೆ ಕುಸಿತ ಕಂಡಿದ್ದು, ಮ್ಯಾಜಿಕ್ ನಂಬಕ್ 258ಕ್ಕೆ ಕುಸಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


