ದೇಶ

4 ದಿನ 40 ಕೀಚಕರಿಂದ ಸಾಮೂಹಿಕ ಅತ್ಯಾಚಾರ; ನರಕಯಾತನೆಯ ಭೀಕರತೆ ಬಿಚ್ಚಿಟ್ಟ ಯುವತಿ!

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊರ್ವಳನ್ನು ಗೆಸ್ಟ್ ಹೌಸ್ ಗೆ ಕರೆಸಿಕೊಂಡ ಯುವಕರ ತಂಡ ನಾಲ್ಕು ದಿನಗಳ ಕಾಲ ಸುಮಾರು 40 ಮಂದಿ ಕೀಚಕರು...

4 ದಿನ 40 ಕೀಚಕರಿಂದ ಸಾಮೂಹಿಕ ಅತ್ಯಾಚಾರ; ನರಕಯಾತನೆಯ ಭೀಕರತೆ ಬಿಚ್ಚಿಟ್ಟ ಯುವತಿ!
ಸಂಗ್ರಹ ಚಿತ್ರ
Published On :
ಪಂಚಕುಲಾ(ಹರಿಯಾಣ): ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊರ್ವಳನ್ನು ಗೆಸ್ಟ್ ಹೌಸ್ ಗೆ ಕರೆಸಿಕೊಂಡ ಯುವಕರ ತಂಡ ನಾಲ್ಕು ದಿನಗಳ ಕಾಲ ಸುಮಾರು 40 ಮಂದಿ ಕೀಚಕರು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಹರಿಯಾಣದ ಪಂಚಕುಲಾದಲ್ಲಿ ನಡೆದಿದೆ. 
ಚಂಢೀಗಡ ಮೂಲದ 22 ವರ್ಷದ ಯುವತಿಯನ್ನು ದುರುಳರು ಪಂಚಕುಲಾ ಜಿಲ್ಲೆಯ ಮೋರ್ನಿ ಹಿಲ್ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗೆಸ್ಟ್ ಹೌಸ್ ನಲ್ಲಿ ಬಂಧಿಸಿಟ್ಟಿದ್ದಾರೆ. 
ನಾಲ್ಕು ದಿನಗಳ ಕಾಲ ಆಕೆಯನ್ನು ಗೃಹಬಂಧನದಲ್ಲಿರಿಸಿ ಸುಮಾರು ನಲವತ್ತು ಮಂದಿ ಆಕೆಯನ್ನು ಅತ್ಯಾಚಾರ ಎಸಗಿದ್ದಾರೆ. ನಾಲ್ಕು ದಿನಗಳ ಬಳಿಕ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಯವರ ಸಹಾಯದಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. 
ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಇನ್ನುಳಿದವರಿಗಾಗಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.