ದೇಶ

ಜುಲೈ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದಿಗೆ ಗೋವಾ ನಿಷೇಧ

ಮೀನುಗಳನ್ನು ಫ್ರೆಶ್​ ಆಗಿಡಲು ಫಾರ್ಮಲಿನ್ (ಫಾರ್ಮಲ್ ​ಡಿಹೈಡ್​) ಎಂಬ ರಾಸಾಯನಿಕವನ್ನು ಬಳಸಲಾಗುತ್ತಿದೆ...

ಜುಲೈ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದಿಗೆ ಗೋವಾ ನಿಷೇಧ
ಸಾಂದರ್ಭಿಕ ಚಿತ್ರ
Published On :
ಪಣಜಿ: ಮೀನುಗಳನ್ನು ಫ್ರೆಶ್​ ಆಗಿಡಲು ಫಾರ್ಮಲಿನ್ (ಫಾರ್ಮಲ್ ​ಡಿಹೈಡ್​) ಎಂಬ ರಾಸಾಯನಿಕವನ್ನು ಬಳಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಈ ತಿಂಗಳ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದಿಗೆ ಬುಧವಾರ ನಿಷೇಧ ಹೇರಿದೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಗೋವಾ ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಈ ಸಂಬಂಧ ಇಂದು ಸಂಜೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಗೋವಾದಲ್ಲಿ ವಾರ್ಷಿಕ ಮೀನುಗಾರಿಕೆ ನಿಷೇಧ ಜುಲೈ 31ಕ್ಕೆ ಅಂತ್ಯಗೊಳ್ಳಲಿದ್ದು, ಆಗಸ್ಟ್ 1ರಿಂದ ಮತ್ತೆ ಮೀನುಗಾರಿಕೆ ಆರಂಭವಾಗಲಿದೆ. ಹೀಗಾಗಿ ಮೀನಿನ ಕೊರತೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮೀನುಗಳಲ್ಲಿ ಫಾರ್ಮಲಿನ್ ಅಂಶ ಕಂಡುಬಂದಿದ್ದು, ಇದರಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಮಾರಕ ಅಂಶವಿದೆ ಎಂಬ ಕಾರಣಕ್ಕೆ ಅಸ್ಸಾಂ ಸಹ ಹೊರ ರಾಜ್ಯಗಳಿಂದ ಮೀನು ಖರೀದಿಸುವುದನ್ನು ನಿಷೇಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.