ಕಥುವಾ ಅತ್ಯಾಚಾರ ಆರೋಪಿ ಪರ ಮಾಜಿ ವಕೀಲ ಕಾಶ್ಮೀರ ಎಎಜಿಯಾಗಿ ನೇಮಕ
ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರ ವಕಾಲತ್ ಮಾಡಿದ್ದ ಮಾಜಿ ವಕೀಲ, ಹಾಲಿ...

Published On :
ಕಥುವಾ: ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರ ವಕಾಲತ್ ಮಾಡಿದ್ದ ಮಾಜಿ ವಕೀಲ, ಹಾಲಿ ಡೆಪ್ಯೂಟಿ ಅಡ್ವೊಕೇಟ್ ಜನರಲ ಅಸೀಮ್ ಸಾಹ್ನೆ ಅವರನ್ನು ಜಮ್ಮು ಮತ್ತು ಕಾಶ್ಮೀರದ ನೂತನ ಹೆಚ್ಚುವರಿ ಅಡ್ವೊಕೇಟ್ ಜನರಲ್(ಎಎಜಿ)ಯಾಗಿ ನೇಮಕ ಮಾಡಲಾಗಿದೆ.
ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಪರ ವಾದಿಸಿದ್ದ ಅಸೀಮ್ ಅವರನ್ನು ಕಾಶ್ಮೀರ ಸರ್ಕಾರ ನಿನ್ನೆ ಎಎಜಿಯಾಗಿ ನೇಮಕ ಮಾಡಿದೆ.
ಎಎಜಿಯಾಗಿದ್ದ ಎಂಎ ಬೇಗ್ ಅವರನ್ನು ಪಿಡಿಪಿ-ಬಿಜೆಪಿ ಸರ್ಕಾರ ತೆಗೆದು ಹಾಕಿತ್ತು. ಈಗ ಅವರ ಸ್ಥಾನ ಆಸೀಮ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರJammu and KashmirKathua rape caseಕಥುವಾ ಅತ್ಯಾಚಾರ ಪ್ರಕರಣAseem SawhneyAdditional Advocate Generalಎಎಜಿಅಸೀಮ್ ಸಾಹ್ನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


