ದೇಶ

ಧರ್ಮ, ಜಾತಿ, ನಂಬಿಕೆಗಳು ನಗಣ್ಯ; ನಾನು ಸಮಾಜದ ಪರ: ಬಿಜೆಪಿಗೆ ರಾಹುಲ್ ತಿರುಗೇಟು

ಕಾಂಗ್ರೆಸ್ ​ಮುಸ್ಲಿಮರ ಪಕ್ಷ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ಟೀಕೆಗೆ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ...

ಧರ್ಮ, ಜಾತಿ, ನಂಬಿಕೆಗಳು ನಗಣ್ಯ; ನಾನು ಸಮಾಜದ ಪರ: ಬಿಜೆಪಿಗೆ ರಾಹುಲ್ ತಿರುಗೇಟು
ರಾಹುಲ್ ಗಾಂಧಿ
Published On :
ದೆಹಲಿ: ಕಾಂಗ್ರೆಸ್ ​ಮುಸ್ಲಿಮರ ಪಕ್ಷ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ಟೀಕೆಗೆ ಮಂಗಳವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ನಾನು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪರವಾಗಿರುತ್ತೇನೆ. ದುರ್ಬಲ, ತುಳಿತಕ್ಕೊಳಗಾದ, ನಿರ್ಲಕ್ಷಿತರ ಪರವಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
'ಧರ್ಮ, ಜಾತಿ, ಅವರ ನಂಬಿಕೆಗಳು ನನಗೆ ನಗಣ್ಯ. ನೋವಿನಲ್ಲಿರುವವರನ್ನು ಅಪ್ಪಿಕೊಳ್ಳಲು ನಾನು ಬಯಸುತ್ತೇನೆ. ದ್ವೇಷ ಮತ್ತು ಭಯವನ್ನು ನಾನು ಅಳಿಸಲು ಇಚ್ಛಿಸುತ್ತೇನೆ. ಪ್ರತಿಯೊಂದು ಜೀವಿಗಳನ್ನು ನಾನು ಪ್ರೀತಿಸುತ್ತೇನೆ. ನಾನು ಕಾಂಗ್ರೆಸ್​' ಎಂದು ರಾಹುಲ್​ ಗಾಂಧಿ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿರುವುದಾಗಿ ಉರ್ದು ದಿನಪತ್ರಿಕೆ ಮಾಡಿರುವ ವರದಿ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಮೊದಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​, ನಂತರ ಕೇಂದ್ರ ಮಾನಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಒತ್ತಾಯಿಸಿದ್ದರು. 
ಅಜಮ್​ಘಡದ ಸಮಾವೇಶವೊಂದರಲ್ಲಿ ಇದೇ ವಿಚಾರ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್​ ಕೇವಲ ಮುಸ್ಲಿಮರ ಪರವಾದ ಪಕ್ಷ ಎಂಬ ಸುದ್ದಿಯನ್ನು ನಾನು ಪತ್ರಿಕೆಯಲ್ಲಿ ಓದಿದೆ. ಅದರಿಂದ ನನಗೇನೂ ಆರ್ಶರ್ಯವಾಗಲಿಲ್ಲ. ಆದರೆ, ನಾನು ಅವರನ್ನು ಒಂದು ಪ್ರಶ್ನೆ ಕೇಳಬೇಕೆಂದಿದ್ದೇನೆ. ಕಾಂಗ್ರೆಸ್​ ಮುಸ್ಲಿಮ್ ಪುರುಷರ ಪರವಾಗಿದೆಯೋ ಅಥವಾ ಮುಸ್ಲಿಂ ಮಹಿಳೆಯರ ಪರವಾಗಿಯೂ ಇದೆಯೋ? ಎಂದು ವ್ಯಂಗ್ಯವಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.