ಸೂಪರ್ ಮ್ಯಾನ್ ಎಂದು ಹೇಳಿಕೊಳ್ಳುತ್ತೀರಿ, ಆದರೆ ನೀವು ಏನನ್ನೂ ಮಾಡಿಲ್ಲ: ದೆಹಲಿ ಲೆ.ಗವರ್ನರ್ ಕಾಲೆಳೆದ ಸುಪ್ರೀಂ
ದೆಹಲಿಯ ಕಸದ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜೆಲ್ ಅವರಿಗೆ...

Published On :
ನವದೆಹಲಿ: ದೆಹಲಿಯ ಕಸದ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜೆಲ್ ಅವರಿಗೆ ಸುಪ್ರೀಂಕೋರ್ಟ್ ತಪರಾಕಿ ಹಾಕಿದೆ.
ನನಗೆ ಅಧಿಕಾರವಿದೆ, ನಾನು ಸೂಪರ್ ಮ್ಯಾನ್ ಎಂದು ನೀವು ಹೇಳಿಕೊಳ್ಳುತ್ತೀರಿ, ಆದರೆ ನೀವು ಏನನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಗಮನಿಸಿದೆ, ಮುನಿಸಿಪಲ್ ಕಾರ್ಪೋರೇಷನ್ ಮೇಲೆ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರವಿದೆ, ಆದರೂ ಕಸದ ಸಮಸ್ಯೆ ಬಗೆಹರಿಸಲು ಯಾವುದೇ ತಕ್ಕ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.
ದೇಶಾದ್ಯಂತ ಇರುವ ಘನತ್ಯಾಜ್ಯ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಗಮನಿಸುತ್ತಿದ್ದು, ಕಸದ ರಾಶಿಗೆ ಕೇಂದ್ರ ಸರ್ಕಾರವನ್ನು ಬೈಯ್ಯಬೇಕೋ ಅಥವಾ ದೆಹಲಿ ಸರ್ಕಾರವನ್ನು ಹೊಣೆಯಾಗಿಸಬೇಕೋ ಎಂದು ಕಟುಕಿದೆ.
ಇನ್ನೂ ದೆಹಲಿ ಸಿಎಂ ಪರ ಮಾತನಾಡಿದ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ನೀವು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎಳೆದು ತರಲು ಸಾಧ್ಯವಿಲ್ಲ, ಕಸದ ಸಮಸ್ಯೆ ಬಗೆಹರಿಸಲು ಲೆ. ಗವರ್ನರ್ ಗೆ ಅವಕಾಶವಿದೆ ಎಂದು ತಿಳಿಸಿದೆ. ಕಸದ ಸಮಸ್ಯೆಯಿಂದ ದೆಹಲಿ ಸಮಾಧಿಯಾಗಿದೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂಕೋರ್ಟ್ದೆಹಲಿDelhiLieutenant GovernorGarbage problemಲೆಪ್ಟಿನೆಂಟ್ ಗವರ್ನರ್ಕಸದ ಸಮಸ್ಯೆAnil Baijalಅನಿಲ್ ಬೈಜಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


