ಪ್ರತಿಭಟನೆ ಹಿನ್ನೆಲೆ: ಅಯೋಧ್ಯೆಯಲ್ಲಿ ಆರ್ ಎಸ್ ಎಸ್ ಆಯೊಜಿತ ನಮಾಜ್ ಕಾರ್ಯಕ್ರಮ ರದ್ದು
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಸಾಮೂಹಿಕ ನಮಾಜ್ ಹಾಗು ಕುರಾನ್ ಪಠಣ ಕಾರ್ಯಕ್ರಮ ರದ್ದಾಗಿದೆ.

Published On :
ಅಯೋಧ್ಯೆ(ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಸಾಮೂಹಿಕ ನಮಾಜ್ ಹಾಗು ಕುರಾನ್ ಪಠಣ ಕಾರ್ಯಕ್ರಮ ರದ್ದಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ (ಆರ್ ಎಸ್ ಎಸ್) ಅಂಗ ಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಂಚ್ ಈ ಬೃಹತ್ ಸಾಮೂಹಿಕ ಪ್ರಾರ್ಥನೆ ಆಯೋಜಿಸಿತ್ತು.
ವಿಶ್ವ ಹಿಂದೂ ಪರಿಷತ್ ನ ಪ್ರವೀಣ್ ತೊಗಾಡಿಯಾ, ಇತರೆ ಮುಖಂಡರಾದ ಮಹಂತ್ ರಾಜು ದಾಸ್,ಸಂತೋಷ್ ದುಬೆ ಇದೇ ಮುಂತಾದವರು ನಮಾಜ್ ಹಾಗು ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಗುರುವಾರದ ಕಾರ್ಯಕ್ರಮ ರದ್ದಾಗಿದೆ.
ಇಂತಹಾ ಆಚರಣೆ ಸರಯೂ ನದಿಯ ಪಾವಿತ್ರ್ಯತೆಯನ್ನೇ ಹಾಳುಮಾಡುತ್ತದೆ ಎಂದು ಅವರು ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ayodhya disputeಅಯೋಧ್ಯಾ ವಿವಾದRashtriya Muslim Manchರಾಷ್ಟ್ರೀಯ ಮುಸ್ಲಿಂ ಮಂಚ್Saryu riverRam ki Pairiಸರಯು ನದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


