ತರೂರ್ ವಿವಾದಾತ್ಮಕ ಹೇಳಿಕೆ:ಮಾತಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಾಂಗ್ರೆಸ್ ಸೂಚನೆ
ಸಂಸದ ಶಶಿ ತರೂರ್ ಹಿಂದೂ-ಪಾಕಿಸ್ತಾನ ಹೇಳಿಕೆಗೆ ಕಾಂಗ್ರೆಸ್ ಅಸಮ್ಮತಿ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಬಳಸುವ ಮಾತಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಮುಖಂಡರಿಗೆ ಸೂಚನೆ ನೀಡಿದೆ.

ನವದೆಹಲಿ: ಸಂಸದ ಶಶಿ ತರೂರ್ ಹಿಂದೂ-ಪಾಕಿಸ್ತಾನ ಹೇಳಿಕೆಗೆ ಕಾಂಗ್ರೆಸ್ ಅಸಮ್ಮತಿ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಬಳಸುವ ಮಾತಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಮುಖಂಡರಿಗೆ ಸೂಚನೆ ನೀಡಿದೆ.
2019ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಸಂವಿಧಾನವನ್ನು ಮತ್ತೆ ಬರೆಯಲಿದೆ.ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದು ನಿನ್ನೆ ಶಶಿ ತರೂರ್ ನೀಡಿದ್ದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಶಶಿ ತರೂರ್ ಹೇಳಿಕೆ ಕುರಿತಂತೆ ಸರಣಿ ಟ್ವಿಟ್ ಪ್ರಕಟಿಸಿರುವ ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ರಣದೀಪ್ ಸುರ್ಜೀವಾಲಾ, ಬಿಜೆಪಿಯ ದ್ವೇಷವನ್ನು ತಿರಸ್ಕರಿಸುವ ಭರದಲ್ಲಿ ಮಾತನಾಡುವಾಗ ಎಲ್ಲಾ ಕಾಂಗ್ರೆಸ್ ಮುಖಂಡರು ನಮ್ಮ ಮೇಲೆ ಇರುವ ಐತಿಹಾಸಿಕ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮೋದಿ ಸರ್ಕಾರದ ಮೇಲೆ ಸುರ್ಜಿವಾಲಾ ದಾಳಿ ನಡೆಸಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ವಿಭಾಗ, ಧರ್ಮಾಂಧತೆ, ದ್ವೇಷ, ಅಸಹಿಷ್ಣುತೆ ಮತ್ತು ಧ್ರುವೀಕರಣದ ಅಭೂತಪೂರ್ವ ವಾತಾವರಣ" ದಲ್ಲಿ ಅದು ಬೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನಂಬಿಕೆಗಳು ಮತ್ತು ಜನಾಂಗಗಳ ನಡುವಿನ ಬಹುಸಂಖ್ಯಾತ, ವೈವಿಧ್ಯತೆ, ಸಹಾನುಭೂತಿ ಮತ್ತು ಸಾಮರಸ್ಯದ ಭಾರತದ ನಾಗರಿಕ ಮೌಲ್ಯಗಳನ್ನು ಕಾಂಗ್ರೆಸ್ ಪ್ರತಿನಿಧಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಂಗ್ರೆಸ್ ವಕ್ತಾರ ಜೈವೇರ್ ಶೆರ್ಗಿಲ್ ಅವರು ಅಧಿಕಾರಕ್ಕೆ ಬಂದ ಸರಕಾರವನ್ನು ಹೊರತುಪಡಿಸಿ ಭಾರತದ ಪ್ರಜಾಪ್ರಭುತ್ವವು ಪಾಕಿಸ್ತಾನ ಆಗಲು ಎಂದಿಗೂ ಅನುಮತಿಸುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


