ದೇಶ

ದೇಶದ್ರೋಹ ಆರೋಪ: ಉಮರ್ ಖಲೀದ್, ಕನ್ಹಯ ಕುಮಾರ್ ಶಿಕ್ಷೆ ನಿರ್ಧಾರ ಎತ್ತಿಹಿಡಿದ ಜೆಎನ್ ಯು

ಫೆಬ್ರವರಿ 9, 2016 ರ ಘಟನೆಗೆ ಸಂಬಂಧಿಸಿ ಕನ್ಹಯ ಕುಮಾರ್ ಗೆ 10 ಸಾವಿರ ದಂಡ ವಿಧಿಸಿರುವ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್ ಯು) ಉನ್ನತ ತನಿಖಾ ಸಮಿತಿ ಉಮರ್....

ದೇಶದ್ರೋಹ ಆರೋಪ: ಉಮರ್ ಖಲೀದ್, ಕನ್ಹಯ ಕುಮಾರ್  ಶಿಕ್ಷೆ ನಿರ್ಧಾರ ಎತ್ತಿಹಿಡಿದ ಜೆಎನ್ ಯು
ಉಮರ್ ಖಲೀದ್, ಕನ್ಹಯ ಕುಮಾರ್
Published On :
ನವದೆಹಲಿ: ಫೆಬ್ರವರಿ 9, 2016 ರ ಘಟನೆಗೆ ಸಂಬಂಧಿಸಿ ಕನ್ಹಯ ಕುಮಾರ್ ಗೆ 10 ಸಾವಿರ ದಂಡ ವಿಧಿಸಿರುವ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್ ಯು) ಉನ್ನತ ತನಿಖಾ ಸಮಿತಿ ಉಮರ್ ಖಾಲಿದ್ ನ ಸಂಬಂಧ ತನ್ನ ನಿರ್ಧಾರವನ್ನು  ಎತ್ತಿ ಹಿಡಿದಿದೆ.
2016ರಲ್ಲಿ ಸಂಸತ್ತು ದಾಳಿಯ ಆರೋಪಿ ಅಫ್ಝಲ್ ಗುರುವಿನ ಮರಣದಂಡನೆ ವಿಚಾರವಾಗಿ ಜೆಎನ್ ಯು ನ ಖಲೀದ್ ಮತ್ತು ಇನ್ನಿತರ ವಿದ್ಯಾರ್ಥಿಗಳು ವಿದ್ಯಾರ್ಥಿ ನಾಯಕ ಕನ್ಹಯ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಇದೀಗ ತನಿಖಾ ಸಮಿತಿ ಈ ಪ್ರಕರಣದ ವಿಚಾರಣೆ ನಡೆಸಿದ್ದು ಕನ್ಹಯ ಅವರಿಗೆ 10 ಸಾವಿರ ರು. ದಾಂಡ ವಿಧಿಸಿದೆ.
ಅದೇ ವೇಳೆ ಶಿಸ್ತು ಕ್ರಮದ ಉಲ್ಲಂಘನೆ ಸಂಬಂಧ ಸಮಿತಿಯು ಇತರೆ 13 ವಿದ್ಯಾರ್ಥಿಗಳ ಮೇಲೆ ಸಹ ದಂಡ ಹಾಕಿದ್ದು ಈ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ದೆಹಲಿ ಹೈ ಕೋರ್ಟ್ ಮೊರೆ ಹೋಗಿದ್ದರು.ಆದರೆ ನ್ಯಾಯಾಲಯವು ಸಮಿತಿಯ ನಿರ್ಧಾರವನ್ನು ಮೇಲ್ಮನವಿ ಪ್ರಾಧಿಕಾರವು ಪರಿಶೀಲನೆ ನಡೆಸಬೇಕೆಂದು ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿತ್ತು.
ಮೂಲದ ಪ್ರಕಾರ ಸಮಿತಿಯು ಖಲೀದ್ ಮತ್ತು ಕುಮಾರ್ ಸಂಬಂಧ ತನ್ನ ನಿರ್ಧಾರವನ್ನು ಎತ್ತಿ ಹಿಡಿದಿದೆ."ಕೆಲವು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ" ಎಂದು ತಿಳಿದುಬಂದಿದೆ.
ರಾಷ್ಟ್ರ ವಿರೋಧಿ ಘೊಷಣೆ ಕೂಗಿದರೆನ್ನುವ ಕಾರಣದಲ್ಲಿ ಕುಮಾರ್, ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ.ಅವರನ್ನು  ಫೆಬ್ರವರಿ 2016ರಲ್ಲಿ ಬಂಧಿಸಲಾಗಿತ್ತು.ದೇಶದ್ರೋಹದ ಆರೋಪದ ಮೇಲೆ ಅವರ ಬಂಧನವಾಗಿ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ವಿದ್ಯಾರ್ಥಿ ನಾಯಕರ ಬಂಧನ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.