ವೇದಾಂತ ತಾಮ್ರದ ಘಟಕ ಮುಚ್ಚಲು ನಿರ್ಧಾರ: ತಮಿಳುನಾಡು ಸರ್ಕಾರಕ್ಕೆ ಎನ್ ಜಿಟಿ ನೊಟೀಸ್
ಟ್ಯುಟಿಕೋರಿನ್ ನಲ್ಲಿ ಸ್ಟೈರ್ಲೈಟ್ ತಾಮ್ರದ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂಬ ತಮಿಳುನಾಡು ...

ನವದೆಹಲಿ: ಟ್ಯುಟಿಕೋರಿನ್ ನಲ್ಲಿ ಸ್ಟೈರ್ಲೈಟ್ ತಾಮ್ರದ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂಬ ತಮಿಳುನಾಡು ಸರ್ಕಾರದ ಆದೇಶವನ್ನು ಪ್ರಶ್ನಿಸಿ ವೇದಾಂತ ಲಿಮಿಟೆಡ್ ಸಲ್ಲಿಸಿದ್ದ ಮನವಿ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ತಮಿಳುನಾಡು ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪ್ರತಿಕ್ರಿಯೆ ಕೋರಿದೆ.
ಹಂಗಾಮಿ ಎನ್ ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಜಾವದ್ ರಹಿಮ್ ಇಂದು ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೊಟೀಸ್ ಕಳುಹಿಸಿದ್ದು ಜುಲೈ 18ರೊಳಗೆ ಪ್ರತಿಕ್ರಿಯೆ ನೀಡುವಂತೆ ಹೇಳಿದೆ. ಅಲ್ಲದೆ ವೇದಾಂತ ಮನವಿಯ ಸಮರ್ಥನೀಯವನ್ನು ಪ್ರಶ್ನೆ ಮಾಡುವ ಹೇಳಿಕೆಯನ್ನು ಸಲ್ಲಿಸುವ ಅವಕಾಶವನ್ನು ಕೂಡ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರಕ್ಕೆ ನೀಡಿದೆ.
ತೀವ್ರ ಮಾಲಿನ್ಯ ಉಂಟುಮಾಡುತ್ತಿರುವ ಹಿನ್ನಲೆಯಲ್ಲಿ ಜನರ ಪ್ರತಿಭಟನೆಯಿಂದಾಗಿ ವೇದಾಂತ ಲಿಮಿಟೆಡ್ ನ ತಾಮ್ರದ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ತಮಿಳುನಾಡು ಸರ್ಕಾರ ಆದೇಶ ನೀಡಿತ್ತು. ಕಾರ್ಯನಿರ್ವಹಣೆ ನವೀಕರಣ ಕೋರಿ ಕಳೆದ ಏಪ್ರಿಲ್ ನಲ್ಲಿ ವೇದಾಂತ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ, ಕಂಪೆನಿ ನಿರ್ದಿಷ್ಟ ಷರತ್ತುಗಳನ್ನು ಈಡೇರಿಸಿಲ್ಲ ಎಂದು ತಿಳಿಸಿತ್ತು. ಈ ಸಂಬಂಧ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಕಳೆದ ತಿಂಗಳು 28ರಂದು ಸರ್ಕಾರ ಆದೇಶ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


