ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ರಜನಿ ಪತ್ನಿಗೆ ಸುಪ್ರೀಂ ತರಾಟೆ
ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಪತ್ನಿ ಲತಾ ಅವರನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು.

ನವದೆಹಲಿ: ಜಾಹೀರಾತು ಕಂಪನಿಗೆ ಬಾಕಿ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಪತ್ನಿ ಲತಾ ಅವರನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿತು.
ಜಾಹಿರಾತು ಕಂಪನಿಗೆ ಲತಾ ರಜನಿಕಾಂತ್ ಏಕೆ 6. 20 ಕೋಟಿ ರೂಪಾಯಿಯನ್ನು ಹಿಂತಿರುಗಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಕೊಚಡೈಯ್ಯನ್ ಚಿತ್ರದ ಹಕ್ಕು ಮಾರಾಟಕ್ಕೆ ಸಂಬಂಧಿಸಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಹಾಗೂ ಆಡ್ ಬ್ಯೂರೊ ಮಿಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ ಮೆಂಟ್ ರಂಪನಿ ನಡುವಿನ ಪ್ರಕರಣ ಇದಾಗಿದೆ.
ಖಾಸಗಿ ಕಂಪನಿಯಾದ ಆಡ್ ಬ್ಯೂರೊ ಕಂಪನಿಗೆ 6.20 ಕೋಟಿ ರೂ. ಹಣವನ್ನು ಬಡ್ಡಿ ಸಮೇತ ಹನ್ನೆರಡು ವಾರಗಳೊಳಗೆ ಪಾವತಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 20 ರಂದು ಆದೇಶಿಸಿತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


