ದೇಶ

ಕಗ್ಗಂಟಾದ ಬುರಾರಿ 11 ಮಂದಿ ಸಾಮೂಹಿಕ ಆತ್ಮಹತ್ಯೆ, ಈ 11 ಪೈಪ್ ಗಳ ರಹಸ್ಯವೇನು?

ಕಳೆದ ವಾರ ಬುರಾರಿಯಲ್ಲಿ ನಡೆದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಮತ್ತಷ್ಟು ನಿಗೂಢವಾಗುತ್ತಿದೆ...

ಕಗ್ಗಂಟಾದ ಬುರಾರಿ 11 ಮಂದಿ ಸಾಮೂಹಿಕ ಆತ್ಮಹತ್ಯೆ, ಈ 11 ಪೈಪ್ ಗಳ ರಹಸ್ಯವೇನು?
ಸಂಗ್ರಹ ಚಿತ್ರ
Published On :
ನವದೆಹಲಿ: ಕಳೆದ ವಾರ ಬುರಾರಿಯಲ್ಲಿ ನಡೆದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಮತ್ತಷ್ಟು ನಿಗೂಢವಾಗುತ್ತಿದೆ. 
ದುರಂತ ಅಂತ್ಯ ಕಂಡ ಭಾಟಿಯಾ ಕುಟಂಬ ವಾಸಿಸುತ್ತಿದ್ದ ಮನೆ ಗೋಡೆಯಲ್ಲಿ 11 ಪೈಪ್ ಗಳು ಕಂಡುಬಂದಿದ್ದು 11 ಮಂದಿ ಸಾವಿಗೂ 11 ಪೈಪ್ ಗೂ ಏನಾದರೂ ಸಾಮ್ಯತೆ ಇದೆಯೇ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. 
ಮನೆ ಗೋಡೆಯಲ್ಲಿ ಕಂಡುಬಂದಿರುವ 11 ಪೈಪ್ ಗಿಳಗೂ 11 ಮಂದಿ ಸಾವಿಗೂ ಹೋಲಿಕೆ ಕಂಡುಬಂದಿದೆ. ಹೌದು ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದು 7 ಪೈಪ್ ಗಳು ಬಾಗಿದೆ. ಇನ್ನು ನಾಲ್ಕು ಪೈಪ್ ಗಳು ಬಾಗಿದ್ದು ಮೃತರಲ್ಲಿ ನಾಲ್ವರು ಪುರುಷರಾಗಿದ್ದಾರೆ. 
ಇನ್ನ ಆತ್ಮಗಳು ಮುಕ್ತವಾಗಿ ಹೊರಹೋಗಲು ಈ ಪೈಪ್ ಗಳನ್ನು ಅಳವಡಿಸಿರಬಹುದು ಎಂದು ಸ್ಥಳೀಯ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಪೈಪ್ ಗಳು ಹಾಗೂ ಸಾಮೂಹಿಕ ಸಾವಿನ ನಡುವಿರುವ ಸಂಬಂಧವೇನು? ಎಂಬ ಪ್ರಶ್ನೆ ಈಗ ತನಿಖಾಧಿಕಾರಿಗಳಿಗಷ್ಟೇ ಅಲ್ಲ ಜನಸಾಮಾನ್ಯರನ್ನು ಕಾಡುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.