ದೇಶ

ಕೇರಳದ ಮಹಾರಾಜ ಕಾಲೇಜ್ ಆವರಣದಲ್ಲಿ ಎಸ್ಎಫ್ಐ ಮುಖಂಡನ ಬರ್ಬರ ಹತ್ಯೆ, ಪ್ರಕ್ಷುಬ್ಧ ವಾತಾವರಣ!

ಕೇರಳದ ಮಹಾರಾಜ ಕಾಲೇಜಿನಲ್ಲಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸದಸ್ಯರು ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್ಎಫ್ಐ)ದ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ...

ಕೇರಳದ ಮಹಾರಾಜ ಕಾಲೇಜ್ ಆವರಣದಲ್ಲಿ ಎಸ್ಎಫ್ಐ ಮುಖಂಡನ ಬರ್ಬರ ಹತ್ಯೆ, ಪ್ರಕ್ಷುಬ್ಧ ವಾತಾವರಣ!
ಮೃತ ಅಭಿಮನ್ಯು ಚಿತ್ರ
Published On :
ಕೊಚ್ಚಿ: ಕೇರಳದ ಮಹಾರಾಜ ಕಾಲೇಜಿನಲ್ಲಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸದಸ್ಯರು ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್ಎಫ್ಐ)ದ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 
ಎಸ್ಎಫ್ಐ ಮುಖಂಡನ ಹತ್ಯೆ ಸಂಬಂಧ ಪಿಎಫ್ಐನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹಲ್ಲೆ ವೇಳೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. 
ಎಸ್ಎಫ್ಐ ಮುಖಂಡ 20 ವರ್ಷದ ಅಭಿಮನ್ಯು ಹತ್ಯೆ ಖಂಡಿಸಿ ಎಸ್ಎಫ್ಐ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. 
ಮೃತ ಅಭಿಮನ್ಯು ಇಡುಕಿ ಜಿಲ್ಲೆಯ ವಟ್ಟವಾಡದ ನಿವಾಸಿಯಾಗಿದ್ದು ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.